ಬೆಂಗಳೂರು: ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಪಂದ್ಯಾವಳಿ ನಡೆಯುತ್ತಿದೆ. ಬೆಂಗಳೂರಲ್ಲಿ ಉದ್ಘಾಟನೆಗೊಂಡಿರುವಂತ ಪಂದ್ಯಾವಳಿಗಳು, ಈಗ ಮೈಸೂರಿಗೂ ಶಿಫ್ಟ್ ಆಗಲಿವೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ.
ಈ ಬಗ್ಗೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ನಾನು ಈ ವಿಷಯವನ್ನು ಘೋಷಣೆ ಮಾಡೋದಕ್ಕೆ ಹರ್ಷಿಸುತ್ತಿದ್ದೇನೆ. ಸಿಸಿಎಲ್ 2025 ಪಂದ್ಯಾವಳಿಗಳು ಮೈಸೂರಿಗೂ ಕಾಲಿಡುತ್ತಿವೆ. ಎರಡು ಸೆಮಿ ಫೈನಲ್ ಹಾಗೂ ಒಂದು ಫೈನಲ್ ಪಂದ್ಯಾವಳಿಯನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದೆ ಎಂದಿದ್ದಾರೆ.
ಇನ್ನೂ ಮಾರ್ಚ್.1ರಂದು ಸೆಮಿ ಫೈನಲ್ ಹಾಗೂ ಮಾರ್ಚ್.2ರಂದು ಫೈನಲ್ ಸಿಸಿಎಲ್ 2025ರ ಪಂದ್ಯಾವಳಿಗಳು ಮೈಸೂರಿನಲ್ಲಿ ನಡೆಯಲಿದ್ದಾವೆ ಎಂಬುದಾಗಿ ತಿಳಿಸಿದ್ದಾರೆ.
Supa happy to announce that #CCL2025 is coming to #NammaMysuru .
Two Semifinls and the final will be played at Mysuru on the 1st and 2nd of March.
Thanks to #CCL and #KSCA for accommodating and rendering your support.We, the #KarnatakaBulldozers, are looking forward to seeing…
— Kichcha Sudeepa (@KicchaSudeep) February 18, 2025
ಅಂದಹಾಗೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಫೆಬ್ರವರಿ.8ರಿಂದ ಪ್ರಾರಂಭವಾಗಿದೆ. ಬಾಲಿವುಡ್ ಮತ್ತು ಪ್ರಾದೇಶಿಕ ಚಲನಚಿತ್ರ ತಾರೆಯರನ್ನು ಒಳಗೊಂಡ ರೋಮಾಂಚಕ ಪಂದ್ಯಗಳು ನಡೆಯುತ್ತಿವೆ. ಇದೀಗ ಮೈಸೂರು ನಗರದಲ್ಲಿ ಅತ್ಯಾಕರ್ಷಕ ಪಂದ್ಯಗಳನ್ನು ಅಭಿಮಾನಿಗಳು ವೀಕ್ಷಿಸುವಂತ ಅವಕಾಶ ಸಿಕ್ಕಂತೆ ಆಗಿದೆ.
ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಮಹಿಳಾ ಕೂಲಿ ಕಾರ್ಮಿಕ ಆಸೆ ಈಡೇರಿಸಿದ ‘ರೈತ’
ಪ್ರಯಾಗ್ ರಾಜ್ ಮಹಾ ಕುಂಭಮೇಳ ವಿಸ್ತರಣೆ.? ಇಲ್ಲಿದೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ | Maha Kumbh