ಬೆಂಗಳೂರು : ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಅದರಂತೆ ಅಪರಾಧ ಚಟುವಟಿಕೆಗಳು ಕೂಡ ಹೆಚ್ಚಾಗುತ್ತಿವೆ. ಮಾದಕ ವಸ್ತು ಮಾರಾಟ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದು ವಿದೇಶಿ ಡ್ರಗ್ ಪೆಡ್ಲರನ್ನು ಬಂಧಿಸಿದ್ದು ಆತನಿಂದ ನಾಲ್ಕು ಕೋಟಿ ಮೌಲ್ಯದ ಮಾದಕ ವಸ್ತು ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಶೆಟ್ಟಿಹಳ್ಳಿಯಲ್ಲಿ ನೈಜಿರಿಯಾ ಮೂಲದ ಅಕ್ರಮ ವಾಸಿ ಹೆನ್ರಿ ಚುಕ್ವುಮೆಕಾ ಎಂಬಾತ ಬಂಧಿತ ಆರೋಪಿ. ಇತನಿಂದ ಬರೊಬ್ಬರಿ 4 ಕೋಟಿ ಮೌಲ್ಯದ 4ಕೆಜಿ NDMA ಕ್ರಿಸ್ಟಲ್ನ್ನು ಜಪ್ತಿ ಮಾಡಿದ್ದಾರೆ. ಸಿಸಿಬಿ ಪಿಎಸ್ಐ ಕೇಶವಮೂರ್ತಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಆರೋಪಿ ಪ್ರತಿಷ್ಟಿತ ಕಾಲೇಜ್ ಹಾಗೂ ಐಟಿಬಿಟಿ ಸಿಬ್ಬಂದಿಗಳಿಗೆ ಹೆಚ್ಚಿನ ಹಣಕ್ಕೆ ಡ್ರಗ್ ಮಾರುತ್ತಿದ್ದ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.