ಬೆಂಗಳೂರು : ವಿಧಾನಸಭೆ ಚುನಾವಣೆ ಹೊತ್ತಲ್ಲೇ 1.9 ಕೋಟಿ ನಕಲಿ ಹಣ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಸಂಬಂಧ ಪಿಚ್ಚಿ ಮುತ್ತು ಎಂಬಾತನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಡಿಸೆಂಬರ್ 28 ರಂದು ಈತ ಬ್ಯಾಗ್ ನಲ್ಲಿ ನಕಲಿ ನೋಟುಗಳನ್ನು ತುಂಬಿಸಿಕೊಂಡು ಬರುತ್ತಿರುವ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಈತನನ್ನು ಬಲೆಗೆ ಬೀಳಿಸಿದ್ದಾರೆ.
2000 ಮುಖ ಬೆಲೆಯ 623 ನಕಲಿ ನೋಟು ಹಾಗೂ 500 ಮುಖ ಬೆಲೆಗೆ 174 ನಕಲಿ ನೋಟುಗಳು ಪತ್ತೆಯಾಗಿದೆ. ಆರೋಪಿಯು ತಮಿಳುನಾಡಿನ ತೂತ್ತುಕುಡಿಯಿಂದ ನಕಲಿ ನೋಟುಗಳನ್ನು ತರುತ್ತಿದ್ದನು ಎನ್ನಲಾಗಿದೆ.
ಈ ಕುರಿತು ಸಿದ್ದಾಪುರ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಆರೋಪಿ ಬಾಯ್ಬಿಟ್ಟಿಲ್ಲ ಎಂಬುದಾಗಿ ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ.
PSI ನೇಮಕಾತಿ ಹಗರಣದ 27 ಆರೋಪಿಗಳಿಗೆ ಜಾಮೀನು : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಗರಂ
BIGG NEWS : ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಯನ್ನ ಭೇಟಿ, ಹಿಗ್ಗಾಮುಗ್ಗಾ ಥಳಿತ, ಸ್ಥಿತಿ ಗಂಭೀರ