ಬೆಂಗಳೂರು : ಅಶ್ಲೀಲ ಫೋಟೋ ಕಳಿಸಿ ಹಣ ನೀಡುವಂತೆ ಬ್ಲಾಕ್ಮೇಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಬಿ ಪೊಲೀಸರು ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ ಎಂಬಾತ ಜೈಲಲ್ಲಿ ಕುಳಿತುಕೊಂಡು ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಈ ಹಿನ್ನಲೆ ಮನೋಜ್ ಅಲಿಯಾಸ್ ಕೆಂಚ, ಸುಭಾಷ್ ಹಾಗೂ ಯೋಗೆಶ್ ಎಂಬುವವರನ್ನು ಬಂಧಿಸಲಾಗಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಮಹಿಳೆಯ ತಾಯಿಗೆ ಆರೋಪಿ ಫೋಟೋ ಕಳುಹಿಸಿದ್ದ. ಫೋಟೋ ಕಳುಹಿಸಿ ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ ಹಣ ಪಡೆದಿದ್ದ ಮತ್ತೆ ಫೋಟೋ ಕಳುಹಿಸಿ ಆರೋಪಿ ಮನೋಜ್ 5ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಇದರಿಂದ ಬೇಸತ್ತು ಮಹಿಳೆಯ ತಾಯಿಯಿಂದ ಪೊಲೀಸ್ ಸರಿಗೆ ದೂರು ನೀಡಲಾಗಿತ್ತು.ಯಲಹಂಕ ನ್ಯೂಟನ್ ಠಾಣೆಗೆ ತಾಯಿ ದೂರು ನೀಡಿದ್ದರು.ಪ್ರಕರಣ ಸಿಸಿಬಿಗೆ ವರ್ಗಾವಣೆ ಹಿನ್ನೆಲೆ ಇದೀಗ ಆರೋಪಿಗಳು ಸಿಸಿಬಿ ವಶಕ್ಕೆ ಒಳಗಾಗಿದ್ದಾರೆ.ಬಾಡಿ ವಾರೆಂಟ್ ಮೇಲೆ ಮನೋಜ್ ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವನ್ಯ ಜೀವಿಗಳ ಅಂಗಾಂಗ ಮರಳಿಸಲು ಏ.10ರವರೆಗೆ ಗಡುವು : ತಪ್ಪಿದಲ್ಲಿ ದೂರು ದಾಖಲು : ಸಚಿವ ಖಂಡ್ರೆ
ಅಂಬೇಡ್ಕರ್ ಭವನದ ಮಾದರಿಯಲ್ಲಿ ‘ಬಸವ ಭವನ’ ನಿರ್ಮಿಸಿ:ಶಾಸಕ ಶಾಮನೂರು ಶಿವಶಂಕರಪ್ಪ ಆಗ್ರಹ
ನಾನು ಸಾಕಷ್ಟು ಬುದ್ಧಿವಂತನಾಗಿದ್ದರೆ ನೀವು ನನ್ನನ್ನು ಮೆಚ್ಚಿಕೊಳ್ಳಬೇಕು: ರಷ್ಯಾದ ತೈಲ ಖರೀದಿಗೆ ಸಚಿವ ಜೈಶಂಕರ್