ನವದೆಹಲಿ: ಸಿಟಿಇಟಿ 2022 ಪ್ರವೇಶ ಪತ್ರವನ್ನು ( CTET 2022 admit card ) ಬಿಡುಗಡೆ ಮಾಡಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (Central Board of Secondary Education – CBSE) ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ (Central Teacher Eligibility Test -CTET) 2022 ರ ಡಿಸೆಂಬರ್ ಆವೃತ್ತಿಯ ಪ್ರವೇಶ ಪತ್ರಗಳನ್ನು ctet.nic.in ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಹಾಗಾದರೇ ಅದನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.
ಸಿಬಿಎಸ್ಸಿಯಿಂದ ಸಿಟಿಇಟಿ ಪರೀಕ್ಷೆಯನ್ನು ಡಿಸೆಂಬರ್ ರಿಂದ ಜನವರಿ 2023ರವರೆಗೆ ನಿಗದಿ ಪಡಿಸಲಾಗಿದೆ. ಈ ಪರೀಕ್ಷೆಗೆ ಇದೀಗ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ನೀವು ಪ್ರವೇಶ ಪತ್ರವನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಸಿಟಿಇಟಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಲು, ಈ ಹಂತ ಅನುಸರಿಸಿ
- ctet.nic.in ಗೆ ಹೋಗಿ
- ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಲು ಲಿಂಕ್ ತೆರೆಯಿರಿ
- ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕದೊಂದಿಗೆ ಲಾಗಿನ್ ಮಾಡಿ
- ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ
- ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ- ಮೊದಲನೆಯದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೆಯದು ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ.
ಎರಡು ಪತ್ರಿಕೆಗಳು ಇರುತ್ತವೆ. ಮೊದಲ ಪತ್ರಿಕೆ 1 ರಿಂದ 5 ನೇ ತರಗತಿಗಳಿಗೆ ಬೋಧನಾ ಸ್ಥಾನಕ್ಕಾಗಿ ಮತ್ತು ಪತ್ರಿಕೆ 2 ರಿಂದ 6 ರಿಂದ 8 ನೇ ತರಗತಿಗಳಿಗೆ ಇರುತ್ತದೆ.
‘ಮದ್ಯವ್ಯಸನಿ ಅಧಿಕಾರಿ’ಗಿಂತ ವ್ಯಸನಿಯಲ್ಲದ ‘ಆಟೋ ರಿಕ್ಷಾ’ ಚಾಲಕ, ಇಲ್ಲವೇ ‘ಕೂಲಿ ಕಾರ್ಮಿಕ’ ಉತ್ತಮ ವರ – ಕೇಂದ್ರ ಸಚಿವ
ಇಂದು ದೆಹಲಿಯ ‘ವೀರ್ ಬಾಲ್ ದಿವಸ್’ ಕಾರ್ಯಕ್ರಮದಲ್ಲಿ ‘ಪ್ರಧಾನಿ ಮೋದಿ’ ಭಾಗಿ | Veer Bal Diwas Programme