ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರ ಆಸ್ತಿ ಜಪ್ತಿ ಮಾಡುವ ಸಂಬಂಧ ರಾಜ್ಯ ಸರ್ಕಾರದ ಅನುಮತಿಗಾಗಿ ಸಿಬಿಐ ಕೋರಿತ್ತು. ಆದ್ರೇ ಸರ್ಕಾರ ಮಾತ್ರ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಈ ಸಂಬಂಧ ಸಿಬಿಐ ಈಗ ಹೈಕೋರ್ಟ್ ಮೆಟ್ಟಿಲೇರಿ, ಈ ವಿಚಾರವನ್ನು ಪ್ರಶ್ನಿಸಿದೆ. ಹೀಗಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿದ್ದರು. ಪ್ರತಿ ಜಿಲ್ಲೆಯಲ್ಲೂ ತಮ್ಮ ಪಕ್ಷದ ಅಭ್ಯರ್ಥಿಯನ್ನು ಮುಂಬರುವ ಚುನಾವಣೆಯಲ್ಲಿ ಕಣಕ್ಕೆ ಇಳಿಸೋದಾಗಿಯೂ ಘೋಷಿಸಿದ್ದರು. ಇಂತಹ ಅವರ ಆಸ್ತಿ ಜಪ್ತಿಗೆ ಸಿಬಿಐ ಕರ್ನಾಟಕ ಸರ್ಕಾರದ ಅನುಮತಿ ಕೋರಿತ್ತು.
ಸಿಬಿಐ ರಾಜ್ಯ ಸರ್ಕಾರಕ್ಕೆ ಜನಾರ್ಧನ ರೆಡ್ಡಿಗೆ ಸಂಬಂಧಿಸಿದಂತ ಆಸ್ತಿ ಜಪ್ತಿ ಮಾಡೋದಕ್ಕೆ ಮಾತ್ರ ಕಳೆದ ಆಗಸ್ಟ್ 30, 2022ರಂದು ಅನುಮತಿ ಕೋರಿತ್ತು. ಆದ್ರೇ ಈವರೆಗೆ ಅನುಮತಿಯನ್ನು ನೀಡದೇ ಮೀನಾಮೇಷವನ್ನು ಎಣಿಸುತ್ತಿದೆಯಂತೆ. ಹೀಗಾಗಿ ಹೈಕೋರ್ಟ್ ನಲ್ಲಿ ಆಸ್ತಿ ಜಪ್ತಿಗೆ ಅನುಮತಿ ನೀಡುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ.
ಇನ್ನೂ ಹೈಕೋರ್ಟ್ ಗೆ ಸಲ್ಲಿಸಿದಂತ ಅರ್ಜಿಯಲ್ಲಿ, ಜನಾರ್ಧನ ರೆಡ್ಡಿಯವರು ಕರ್ನೂಲ್, ರಂಗಾರೆಡ್ಡಿ ಜಿಲ್ಲೆಗಳಲ್ಲಿನ ಆಸ್ತಿ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅಕ್ರಮ ಹಣದ ಮೂಲಕ ಖರೀದಿಸಿದಂತ 219 ಆಸ್ತಿಯನ್ನು ಜಪ್ತಿ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬುದಾಗಿ ಮನವಿ ಮಾಡಿದೆ.
Good News : ವಿಜ್ಞಾನಿಗಳ ಅದ್ಭುತ ಅವಿಷ್ಕಾರ ; ಭವಿಷ್ಯದಲ್ಲಿ ‘ಹೃದಯಾಘಾತ’ದಿಂದ ಸಾವು ಸಂಭವಿಸೋಲ್ಲ
BIGG NEWS : ‘ಟ್ವಿಟರ್’ ಖಾತೆ ಸಸ್ಪೆಂಡ್ ಆಗಲು ಅಸಲಿ ಕಾರಣ ಕೊಟ್ಟ ನಟ ಕಿಶೋರ್ |Actor Kishore
Good News: ರಾಷ್ಟ್ರೀಯ ಹಸಿರು ಜಲಜನಕ ಮಿಷನ್ಗೆ ಅನುಮೋದನೆ, 6 ಲಕ್ಷ ಉದ್ಯೋಗ ಸೃಷ್ಟಿ