ಹೈದರಾಬಾದ್: ಕೇಂದ್ರೀಯ ತನಿಖಾ ದಳ (CBI) ನಿರ್ದೇಶಕ ಪ್ರವೀಣ್ ಸೂದ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸಿಬಿಐ ನಿರ್ದೇಶಕರಾಗಿರುವಂತ ಪ್ರವೀಣ್ ಸೂದ್ ಅವರು ಆಂಧ್ರಪ್ರದೇಶದ ದೇವಸ್ಥಾನ ನಗರಿಯಾದ ಶ್ರೀಕಾಕುಳಂಗೆ ಭೇಟಿ ನೀಡಿದ್ದರು. ಆ ಬಳಿಕ ಹೈದರಾಬಾದ್ ಗೆ ವಾಪಾಸ್ ಆಗುತ್ತಿದ್ದರು. ಈ ಸಂದರ್ಭದಲ್ಲಿ ಪ್ರವೀಣ್ ಸೂದ್ ಇಂದು ಮಧ್ಯಾಹ್ನ ಮಾರ್ಗಮಧ್ಯದಲ್ಲಿ ಅಸ್ವಸ್ಥತೆಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರವೀಣ್ ಸೂದ್ ಅವರಿಗೆ ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ತೀವ್ರ ನಿಗಾ ಘಟದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂಬುದಾಗಿ ತಿಳಿದು ಬಂದಿದೆ.
ಈ ರೈಲುಗಳು ಸಂಚಾರ ಭಾಗಶಃ ರದ್ದು, ನಿಯಂತ್ರಣ ಮತ್ತು ವೇಳಾಪಟ್ಟಿ ಮರುನಿಗದಿ
ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ