ಬೆಳಗಾವಿ : ಸಿಬಿಐ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ. ಈ ಹಿಂದೆ ಜನಾರ್ಧನರೆಡ್ಡಿ, ಕೇಂದ್ರದ ಮಾಜಿ ಸಚಿವ ಸಿದ್ಧೇಶ್ವರ್ ನಿವಾಸದ ಮೇಲೂ ಆದಾಯ ತೆರಿಗೆ ದಾಳಿ ನಡೆಸಿತ್ತು ಎಂದು ಸಚಿವ ಆರ್ ಅಶೋಕ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ಸಿಬಿಐ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ, ಈ ಹಿಂದೆ ಜನಾರ್ಧನರೆಡ್ಡಿ, ಕೇಂದ್ರದ ಮಾಜಿ ಸಚಿವ ಸಿದ್ಧೇಶ್ವರ್ ನಿವಾಸದ ಮೇಲೂ ಆದಾಯ ತೆರಿಗೆ ದಾಳಿ ಆಗಿತ್ತು. ಆಗ ಕಾಂಗ್ರೆಸ್ನವರೂ ಮಾತನಾಡಲಿಲ್ಲ ಎಂದರು.
ಸಿಬಿಐ ಒಂದು ಸ್ವತಂತ್ರ ಸಂಸ್ಥೆ, ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದೆ. ಅವರು ಸರಿಯಾದ ಕೆಲಸ ಮಾಡಿಲ್ಲ ಎಂದರೇ ಕೋರ್ಟ್ ಇದೆ. ಅಲ್ಲಿ ಹೋರಾಟ ಮಾಡಲಿ ಎಂದು ತಿರುಗೇಟು ನೀಡಿದರು.
BIGG NEWS: ಆಸ್ತಿ, ನೀರಿನ ತೆರಿಗೆ 2 ಕೋಟಿ ಪಾವತಿಸುವಂತೆ ತಾಜ್ ಮಹಲ್ ಗೆ ನೋಟಿಸ್ ಜಾರಿ| Taj Mahal Gets Notice
ಇಂದಿನ ದಿನಗಳಲ್ಲಿ ಜನರಲ್ಲಿ ಕಾಡುತ್ತಿದ್ದೀಯಾ ಮಾನಸಿಕ ಆರೋಗ್ಯ? ಇಲ್ಲಿದೆ ಕಾರಣಗಳು|Mental Health
BREAKING NEWS : ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ |Belagavi Winter Session 2022