ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದೊಂದಿಗೆ ಕೈಜೋಡಿಸಿದೆ.ಡಿಎಂಕೆ –ಕಾಂಗ್ರೆಸ್ ಮೈತ್ರಿ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕವು, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವ್ಯಂಗ್ಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ‘ಕಾವೇರಿ ನೀರು ಹಂಚಿಕೆ’ ವಿಚಾರಕ್ಕೆ ಹೋಲಿಸಿದೆ.
BREAKING:ಪಾಕಿಸ್ತಾನದಲ್ಲಿ ಉಗ್ರರ ಮೇಲೆ ಗುಂಡಿನ ದಾಳಿ: ಇಬ್ಬರು IAS ಅಧಿಕಾರಿಗಳು ಹುತಾತ್ಮ | Watch Video
‘ಇಂಡಿಯಾ ಮೈತ್ರಿಕೂಟದ ಭಾಗವಾಗಿ ತಮಿಳುನಾಡಿಗೆ ಕಾವೇರಿ ನೀರು ಉಚಿತ-ಖಚಿತ-ನಿಶ್ಚಿತ. ಕನ್ನಡಿಗರಿಗೆ ಕಷ್ಟ-ನಷ್ಟ-ಸಂಕಟ ಎಲ್ಲಾ ಫ್ರೀ, ಫ್ರೀ, ಫ್ರೀ ’ ಎಂದು ಬಿಜೆಪಿ ಲೇವಡಿ ಮಾಡಿದೆ.ಡಿಎಂಕೆ ಪಕ್ಷವು ಮೈತ್ರಿ ಪಕ್ಷ ಕಾಂಗ್ರೆಸ್ಗೆ ರಾಜ್ಯದಲ್ಲಿ ಒಂಬತ್ತು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಒಂದು ಸ್ಥಾನ ಸೇರಿದಂತೆ 10 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.
BREAKING : ‘ಹೆತ್ತ ತಾಯಿಯನ್ನ ಬಿಟ್ಟು ಕೊಡೋಕೆ ಆಗುತ್ತ’ : ಸುಮಲತಾ ಪರ ನಟ ದರ್ಶನ್ ಪ್ರಚಾರ ಫಿಕ್ಸ್
ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ತಮಿಳುನಾಡಿನ ಕಾಂಗ್ರೆಸ್ ಘಟಕದ ಅಧ್ಯಕ್ಷ ಸೆಲ್ವಪೆರುಂಥಗೈ ಅವರು ಸೀಟು ಹಂಚಿಕೆ ಒಪ್ಪಂದಕ್ಕೆ ಶನಿವಾರ ಸಹಿ ಹಾಕಿದ್ದಾರೆ. ಈ ವೇಳೆ ಎಐಸಿಸಿ ಮುಖಂಡರಾದ ಕೆ.ಸಿ. ವೇಣುಗೋಪಾಲ್ ಮತ್ತು ಅಜಯ್ ಕುಮಾರ್ ಹಾಜರಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ್ದ ವೇಣುಗೋಪಾಲ್, ಡಿಎಂಕೆ ನೇತೃತ್ವದ ಮೈತ್ರಿಕೂಟ ರಾಜ್ಯದ ಎಲ್ಲ 40 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ತಮಿಳುನಾಡಿಗೆ ಕಾವೇರಿ ನೀರು ಉಚಿತ-ಖಚಿತ-ನಿಶ್ಚಿತ.
ಕನ್ನಡಿಗರಿಗೆ ಕಷ್ಟ-ನಷ್ಟ-ಸಂಕಟ ಎಲ್ಲಾ ಫ್ರೀ, ಫ್ರೀ, ಫ್ರೀ..#NadaDrohiCongress pic.twitter.com/DSGcDqDgB6
— BJP Karnataka (@BJP4Karnataka) March 10, 2024