ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂದಿನ ಜೀವನ ಶೈಲಿ, ಒತ್ತಡ, ಆಹಾರ ಕ್ರಮಗಳಿಂದ ದೇಹದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತವೆ. ಅದರಲ್ಲಿ ಮುಖದ ಮೇಲೆ ಪದೇ ಪದೇ ಮೊಡವೆ (Acne)ಗಳಾಗುತ್ತವೆ. ಇದರಿಂದ ಮುಖದ ಅಂದ ಹಾಳಾಗುತ್ತದೆ. ಹಾಗಾದ್ರೆ ಮುಖದಲ್ಲಿ ಆಗಾಗ ಮೊಡವೆಗಳು ಬರಲು ಕಾರಣಗಳೇನು ಗೊತ್ತಾ? ಇಲ್ಲಿದೆ ಮುಖ್ಯ ಮಾಹಿತಿ.
BREAKING NEWS : ‘PFI’ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್, ರಿಟ್ ಅರ್ಜಿ ವಜಾ |PFI ban
ಮೊಡವೆ ಎಣ್ಣೆಯುಕ್ತ ತ್ವಚೆ ಹೊಂದಿರುವ ಜನರನ್ನು ಬಹಳಷ್ಟು ಕಾಡುತ್ತದೆ. ಸೌಂದರ್ಯ ಹಾಳು ಮಾಡುವುದರ ಜೊತೆಗೆ ನೋವು ಉಂಟು ಮಾಡುತ್ತದೆ. ಕೆಲವರು ಮೊಡವೆ ಸಮಸ್ಯೆ ತೊಡೆದು ಹಾಕಲು ಮನೆಮದ್ದು ಟ್ರೈ ಮಾಡ್ತಾರೆ. ಇನ್ನು ಕೆಲವರು ಏನನ್ನೂ ಮಾಡದೇ ನೋವು ಅನುಭವಿಸುತ್ತಾರೆ. ಇದರ ಬಗ್ಗೆ ತಜ್ಞರು ಏನ್ ಹೇಳಿದ್ದಾರೆ ಇಲ್ಲಿ ನೋಡೋಣ.
ಮೊಡವೆ ಸಮಸ್ಯೆ ಬಗ್ಗೆ ತಜ್ಞರ ಅಭಿಪ್ರಾಯ
ಮೊಡವೆ ವಿವಿಧ ಕಾರಣಗಳಿಂದ ಉಂಟಾಗುತ್ತದೆ. ಇದು ಯಾವುದೇ ವಯಸ್ಸಿನಲ್ಲಿ ಬೇಕಾದ್ರೂ ಉಂಟಾಗಬಹುದು ಅಂತಾರೆ ಚರ್ಮರೋಗ ತಜ್ಞರು. ಮೊಡವೆ ತುಂಬಾ ಸಾಮಾನ್ಯವಾದ ಚರ್ಮದ ಸಮಸ್ಯೆ. ಆದರೆ ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ದೊಡ್ಡ ಸಮಸ್ಯೆ ಆಗುತ್ತದೆ.
ಮೊಡವೆ ಉಂಟಾಗಲು ಕಾರಣಗಳು
ಹಾರ್ಮೋನು ಬದಲಾವಣೆ
ವಯಸ್ಸಾದಂತೆ ದೇಹದಲ್ಲಿ ಮೊಡವೆಗೆ ಕಾರಣವಾಗುವ ಹಲವು ಅಂಶಗಳು ಬದಲಾವಣೆ ಆಗುತ್ತವೆ. ಪಿರಿಯಡ್ಸ್, ಗರ್ಭಾವಸ್ಥೆ ಮತ್ತು ಮೆನೋಪಾಸ್ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಹಾರ್ಮೋನ್ ಬದಲಾಗುತ್ತವೆ. ಇದು ಮೊಡವೆ ಸಮಸ್ಯೆಗೆ ಕಾರಣವಾಗುತ್ತದೆ.
ಔಷಧಿ ತೆಗೆದುಕೊಳ್ಳುವುದು
ಒತ್ತಡ, ಖಿನ್ನತೆ ಮತ್ತು ಇತರ ಕಾಯಿಲೆಗೆ ಸೇವಿಸುವ ಔಷಧಿಗಳು ಮೊಡವೆ ಸಮಸ್ಯೆ ಉಂಟು ಮಾಡುತ್ತವೆ ಎಂದು ಚರ್ಮರೋಗ ತಜ್ಞರು ಹೇಳಿದ್ದಾರೆ.
ಮೇಕಲ್ ಸಾಧನಗಳ ಅತಿಯಾದ ಬಳಕೆ
ಸೌಂದರ್ಯವರ್ಧಕಗಳ ಅತಿಯಾದ ಬಳಕೆ ಮೊಡವೆಗೆ ಕಾರಣವಾಗುತ್ತದೆ. ಮಹಿಳೆಯರು ದಿನವಿಡಿ ಮೇಕಪ್ನಲ್ಲಿರುವುದು, ರಾತ್ರಿ ಸರಿಯಾಗಿ ಮೇಕಪ್ ಸ್ವಚ್ಛಗೊಳಿಸದಿರುವುದು ಮೊಡವೆಗೆ ಕಾರಣವಾಗಬಹುದು.
ಕೊಬ್ಬಿನ ಆಹಾರ
ಆಹಾರದಲ್ಲಿನ ಟ್ರಾನ್ಸ್ ಕೊಬ್ಬು, ಹಾಲು ಮತ್ತು ಮೀನು ಹೆಚ್ಚಿನ ಸೇವನೆ ಮೊಡವೆಗೆ ಪ್ರಮುಖ ಕಾರಣವಾಗುವ ಸಾಧ್ಯತೆ ಇರುತ್ತದೆ.
ಒತ್ತಡ
ಒತ್ತಡ ಹೊಂದಿದರೆ ಮೊಡವೆ ಸಮಸ್ಯೆ ಕಾಡುತ್ತದೆ. ಇದು ದೇಹದಲ್ಲಿ ಅನೇಕ ಬದಲಾವಣೆ ಜೊತೆಗೆ ಮೊಡವೆ ಸಮಸ್ಯೆ ಉಂಟಾಗುತ್ತದೆ.
ಮೊಡವೆ ಸಮಸ್ಯೆ ಪರಿಹಾರಕ್ಕೆ ಸಿಂಪಲ್ ಟಿಪ್ಸ್
ದಿನಕ್ಕೆ 2 ಬಾರಿ ಮುಖ ಸ್ವಚ್ಛಗೊಳಿಸಿ. ಕಾಲಕಾಲಕ್ಕೆ ಮುಖವನ್ನು ಎಫ್ಫೋಲಿಯೇಟ್ ಮಾಡಿ, ಮೇಕಪ್ ಬ್ರಷ್ ಸ್ವಚ್ಛವಾಗಿಡಿ. ಸಾಕಷ್ಟು ಪ್ರಮಾಣದ ನೀರು ಸೇವಿಸಿ. ಒತ್ತಡ ಬೇಡ, ಮುಖವನ್ನು ಪದೇ ಪದೇ ಮುಟ್ಟಬೇಡಿ. ಆರೋಗ್ಯಕರ ಆಹಾರ ಸೇವಿಸಿ. ಉತ್ತಮ ಮೇಕ್ಅಪ್ ಆಯ್ಕೆಮಾಡಿ.
viral News : ಹೀಗೂ ಉಂಟೇ.. : ಒಬ್ಬನಿಗಾಗಿ ಐವರು ಮಹಿಳೆಯರ ಜಡೆ ಜಗಳದ ಶಾಕಿಂಗ್ video| watch