ಟರ್ಕಿ: ಸರಕು ಇಳಿಸುವಾಗ ಬೃಹತ್ ಹಡಗೊಂದು ಟರ್ಕಿ ಬಂದರಿನಲ್ಲಿ ಮುಳುಗಿದೆ. ಬಂದರಿಗೆ ಬಂದ ಸೀ ಈಗಲ್ ಎಂಬ ಹೆಸರಿನ ನೌಕೆಯಿಂದ ಹಲವಾರು ಕಂಟೇನರ್ಗಳನ್ನು ಹೊರ ತೆಗೆಯಲಾಗುತ್ತಿತ್ತು. ಈ ವೇಳೆ ನೌಕೆ ಮುಳುಗಲಾರಂಭಿಸಿದೆ. ಅದರ ದೃಶ್ಯಾವಳಿ ವೈರಲ್ ಆಗುತ್ತಿವೆ. ಈ ಘಟನೆ ಶನಿವಾರ ನಡೆದಿದೆ.
ಸೀ ಈಗಲ್ ನೌಕೆಯನ್ನು 1984 ರಲ್ಲಿ ನಿರ್ಮಿಸಲಾಗಿದೆ. 3120 ಡಿಡಬ್ಲ್ಯೂಟಿ ಸರಕು ಹಡಗು ಕೆಳಗಿಳಿದ ಸಂದರ್ಭದಲ್ಲಿ ಪೋರ್ಟ್ ಲಿಫ್ಟ್ ಟ್ರಕ್ ಕಂಟೈನರ್ಗಳನ್ನು ಇಳಿಸುವುವಾಗ ಮುಳುಗಲು ಪ್ರಾರಂಭಿಸಿದೆ. ಅಲ್ಲಿದ್ದ ಜನರು ಭಯಭೀತರಾಗಿ ಓಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಟರ್ಕಿಯ ಸಾರಿಗೆ ಮತ್ತು ಮೂಲಸೌಕರ್ಯ ಸಚಿವಾಲಯವು ಟ್ವೀಟ್ ಮಾಡಿದ್ದು, ಟೋಗೊ ಧ್ವಜದ ಹಡಗಿನಿಂದ 24 ಕಂಟೇನರ್ಗಳು ಕಳೆದುಹೋಗಿವೆ ಮತ್ತು ಸಣ್ಣ ತೈಲ ಸೋರಿಕೆ ಕೂಡ ಪತ್ತೆಯಾಗಿದೆ. ಅದೃಷ್ಟವಶಾತ್, ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಯಾವುದೇ ಗಾಯಗಳು ವರದಿಯಾಗಿಲ್ಲ.
BREAKING NEWS: ಮ್ಯಾನ್ಮಾರ್ನ ಶಾಲೆ ಮೇಲೆ ಸೇನಾ ಹೆಲಿಕಾಪ್ಟರ್ ದಾಳಿ: 7 ಮಕ್ಕಳು ಸೇರಿದಂತೆ 13 ಮಂದಿ ಸಾವು
BBMP Welfare schemes: ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನ