ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ ವಿಚಾರವಾಗಿ ಹಿಂದುಳಿದ ವರ್ಗದ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಪ್ರತಿಕ್ರಿಯೆ ನೀಡಿ ಈ ಒಂದು ವರದಿ ಸಲ್ಲಿಕೆಯಾಗುವುದರಿಂದ ಸರ್ವ ಜನಾಂಗಕ್ಕೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ವಿಧಾನಸೌಧದ ಮೇಲಿರುವ ಗೋಪುರ ‘ಗುಂಬಜ್’ ಆಗುತ್ತದೆ : ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ
ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ತಿಳಿಸಿದರು. ಅವರು ಸರಕಾರದ ವರದಿ ನೋಡಿದ ಬಳಿ ಸರಿ ತಪ್ಪು ಎಲ್ಲ ಗೊತ್ತಾಗುತ್ತದೆ. ಜಾತಿಗಣತಿ ವರದಿಯ ಯಾವುದೇ ಮೂಲ ಪ್ರತಿ ಕಳೆದು ಹೋಗಿಲ್ಲ. ಎಲ್ಲಾ ಸಮುದಾಯಗಳನ್ನು ಪರಿಗಣಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದರು.
2008ರಲ್ಲಿ ‘ಚಿನ್ನಸ್ವಾಮಿ’ ಕ್ರೀಡಾಂಗಣದಲ್ಲಿ ‘ಬಾಂಬ್’ ಇಟ್ಟವರೇ ಇಂದು ಪಾಕ್ ಪರ ಘೋಷಣೆ ಕೂಗಿದ್ದಾರೆ :ಮುನಿರತ್ನ ಆರೋಪ
ಜನಸಂಖ್ಯೆ ಸಮುದಾಯವನ್ನು ಪರಿಗಣಿಸಿ ಸಮೀಕ್ಷೆ ಮಾಡಿದ್ದೇವೆ ಅವಕಾಶವಂಚಿತರಾದವರಿಗೆ ಅವಕಾಶ ನೀಡುವ ರಿಟಿನಲ್ಲಿ ವರದಿ ತಯಾರಿಸಲಾಗಿದೆ ಸಮೀಕ್ಷೆ ಸರಿಯಲ್ಲ ಅನ್ನೋ ಮಾತು ಸರಿಯಲ್ಲ ಎಂದು ಕಾಂತರಾಜು ತಿಳಿಸಿದರು ದತ್ತಾಂಶಗಳು ಇಲ್ಲದೆ ನಿರ್ಧಾರ ಮಾಡುವುದು ಕಷ್ಟವಾಗುತ್ತದೆ ಈ ವರದಿ ಸಾರ್ವಜನಾಗಕ್ಕೂ ಒಳ್ಳೆಯದಾಗುತ್ತದೆ.