ತುಮಕೂರು: ಸಹೋದ್ಯೋಗಿ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿರುವ ಆರೋಪದಡಿ ತುಮಕೂರು ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಝೀ ಕನ್ನಡ ನ್ಯೂಸ್ ವರದಿಗಾರ ಜಿ.ಎನ್.ಮಂಜುನಾಥ್ (ಸಮಯ ಮಂಜು) ನೀಡಿರುವ ದೂರಿನ ಮೇರೆಗೆ ತಿಲಕ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಮೇ.21ರಂದು ಬೆಳಿಗ್ಗೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ನಡೆದ ಇಡಿ ದಾಳಿಯ ವರದಿ ಮಾಡಲು ಝೀ ಕನ್ನಡ ನ್ಯೂಸ್ ವರದಿಗಾರ ಮಂಜುನಾಥ್ ಹೋಗಿದ್ದ ವೇಳೆ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಏನಲೇ ನೀನು ಬಂದಿದ್ದೀಯಾ,, ನಿನಗೆ ನೀನೆ ಮಹಾಬುದ್ಧಿವಂತ ಅಂದ್ಕೊಂಡಿದ್ದೀಯಾ, ಏನೇ ಮಾಡಿದರೂ ಕೀಳು ಜಾತಿನೇ, ಕೀಳು ಜಾತಿ ಬುದ್ಧಿ ಬಿಡಲ್ಲ,,, ಮಾದಿಗರ ಬುದ್ದಿ ಲದ್ದಿ ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿ ಏಕಾಏಕಿ ಪಬ್ಲಿಕ್ ಟಿವಿ ಲೋಗೋದಲ್ಲಿ ತಲೆ ಮತ್ತು ಕಿವಿ ಹೊಡೆದಿದ್ದಾನೆ.
ಜಗಳ ಬಿಡಿಸಲು ಹೋದ ಕೆಲ ಪತ್ರಕರ್ತರಿಗೂ ರಕ್ತಗಾಯಗಳಾಗಿದ್ದು, ಝೀ ಕನ್ನಡ ನ್ಯೂಸ್ ವರದಿಗಾರ ಮಂಜುನಾಥ್ ಅವರಿಗೆ ಕಿವಿ, ಬಲ ಕುತ್ತಿಗೆಯ ಬಳಿ ರಕ್ತಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸುಧಾರಿಸಿಕೊಂಡು ತಿಲಕ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.