ಬೆಂಗಳೂರು : ರಾಜ್ಯ ಸರ್ಕಾರಿ ನೌಕರರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ರಾಜ್ಯದ ನೌಕರರು ಕುಟುಂಬದ ಸದಸ್ಯರಿಗೆ ಜನವರಿಯಿಂದ ಕ್ಯಾಶ್ ಲೆಸ್ ಚಿಕಿತ್ಸೆ ಯೋಜನೆ ಜಾರಿಯಾಗಲಿದೆ.
ನೌಕರರಿಗೆ ಹಾಗೂ ಅವರ ಕುಟುಂಬದವರಿಗೆ ಇನ್ನೂ ಮುಂದೆ ರಾಜ್ಯದ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಸೇವೆ ಸಿಗಲಿದೆ. ಮಾರಣಾಂತಿಕ ಕಾಯಿಲೆಗಳು ಸೇರಿ 1,226 ಆರೋಗ್ಯ ಸಮಸ್ಯೆಗಳಿಗೆ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಒಳಗೊಂಡಂತೆ ಸಂಪೂರ್ಣ ನಗದು ರಹಿತ ಚಿಕಿತ್ಸೆ ಸಿಗುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಉಚಿತ ಆರೋಗ್ಯ ಯೋಜನೆಗೆ ಸರ್ಕಾರ ಅಂಗೀಕಾರ ನೀಡಿದೆ. ಈ ಯೋಜನೆ ಹೊಸ ವರ್ಷದಿಂದ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್ ಷಡಾಕ್ಷರಿ ಹೇಳಿದರು.
ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಮಾಡಿದ ವೆಚ್ಚ ಮರುಪಾವತಿ ಪಡೆಯಲು ಹರ ಸಾಹಸ ಪಡಬೇಕಿತ್ತು, ಹಾಗೂ ಚಿಕಿತ್ಸೆಗೆ ನಿಗದಿಪಡಿಸಿರುವ ಮೊತ್ತವೂ ಕಡಿಮೆಯಿತ್ತು, ಇದನ್ನು ನಿವಾರಿಸಿ ನಗದು ರಹಿತವಾಗಿ ಚಿಕಿತ್ಸೆ ವ್ಯವಸ್ಥೆಗಾಗಿ ಸಂಘ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ.ನಿವೃತ್ತ ನೌಕರರಿಗೆ ಈ ಸೌಲಭ್ಯ ವಿಸ್ತರಣೆ ಸಂಬಂಧ ಪ್ರಯತ್ನ ನಡೆಸಲು ಚಿಂತಿಸಲಾಗಿದೆ. 4.50 ಲಕ್ಷ ನಿವೃತ್ತ ನೌಕರರಿದ್ದು, ಅವರಿಗೆ ನಗದುರಹಿತ ಚಿಕಿತ್ಸೆ ಕಲ್ಪಿಸಲು ಪ್ರಯತ್ನಿಸಲಾಗುವುದು. ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಯಾಗುವ ಬ್ಯಾಂಕ್ ಖಾತೆಯಿಂದಲೇ ಶುಲ್ಕ ಕಡಿತ ಮಾಡಿಕೊಂಡು ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ರಾಜ್ಯದ ಕುಶಲಕರ್ಮಿಗಳಿಗೆ ಸಹಾಯ ಧನ
ರಾಜ್ಯದ ಕುಶಲಕರ್ಮಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಸಾಲದ ಜೊತೆಗೆ ಸಹಾಯಧನ ನೀಡಲು ಚಿಂತನೆ ನಡೆಸಿದೆ. ರಾಜ್ಯದ ಕುಂಬಾರ, ಕಮ್ಮಾರ, ವಿಶ್ವಕರ್ಮ, ಬಡಗಿ, ಶಿಲ್ಪಿ ಸೇರಿದಂತೆ ಸಣ್ಣ ಕುಶಲಕರ್ಮಿಗಳಿಗೆ ಸರ್ಕಾರ ಸಾಲ, ಸಹಾಯಧನ ನೀಡುವ ಹೊಸ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ .
ಈ ವಿಶೇಷ ಯೋಜನೆಯಡಿ ಬ್ಯಾಂಕ್ ಗಳಿಂದ ತಲಾ 50,000 ರೂಪಾಯಿ ಸಾಲ-ಸಹಾಯ ಧನ ನೀಡಲಾಗುತ್ತಿದ್ದು, ಇದರಲ್ಲಿ 35, 000 ಸಾಲ ಹಾಗೂ 15,000 ಸಹಾಯ ಧನ ಸಿಗಲಿದೆ. ರಾಜ್ಯದಲ್ಲಿ ಸುಮಾರು 35,000 ಅತಿ ಸಣ್ಣ ನೊಂದಾಯಿತ ಕುಶಲಕರ್ಮಿಗಳಿದ್ದು, ನೊಂದಾಯಿಸಿಕೊಳ್ಳದ ಕುಶಲಕರ್ಮಿಗಳಿಗೂ ಸಾಲ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ.
ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ, ತರಬೇತಿ ನೀಡಿ, ಸಂಘದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ, ತರಬೇತಿ ನೀಡಿ, ಸಂಘದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ.ಈ ಯೋಜನೆಯಂತೆಯೇ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದರು.
BIGG NEWS : ರಾಜ್ಯದ ಕುಶಲಕರ್ಮಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಸಾಲದ ಜೊತೆಗೆ ಸಹಾಯ ಧನ ಯೋಜನೆಗೆ ಗ್ರೀನ್ ಸಿಗ್ನಲ್
ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut