ಬೆಂಗಳೂರು: ನಗರದಲ್ಲಿ ರಾಬರಿ ಹಾಗೂ ಮರ್ಡರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಂಗೇರಿ ಪೊಲೀಸರು ಕೊಲೆ ಆರೋಪಿಯನ್ನ ಹಿಡಿದಿದ್ದಾರೆ. ಮೊಬೈಲ್ ಸ್ನಾಚಿಂಗ್ ಬಗ್ಗೆಯೂ ಸಿರೀಯಸ್ ಆಗಿ ತೆಗೆದುಕೊಳ್ತಿದ್ದೇವೆ . ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ರು, ಪ್ರಕರಣ ಜಾಸ್ತಿಯಾಗ್ತಿದೆ. ಎಲ್ಲಾ ಕೇಸ್ ಗಳನ್ನ ವೈಯಕ್ತಿಕವಾಗಿ ತೆಗೆದುಕೊಂಡು ತನಿಖೆ ಮಾಡ್ತೀವಿ ಎಂದರು.
BREAKING NEWS: ಜೀವರಕ್ಷಕ ಔಷಧಗಳ ಕೊರತೆ: ದೆಹಲಿಯಲ್ಲಿ HIV ರೋಗಿಗಳ ಪ್ರತಿಭಟನೆ
ಹಾಡಹಗಲೇ ಲಾಂಗ್ ಮಚ್ಚು ಹಿಡಿದುಕೊಂಡು ಆರೋಪಿಗಳು ಓಡಾಡ್ತಾರೆ.ಅಂಥವರ ವಿರುದ್ಧವೂ ಕ್ರಮಕೈಗೊಳ್ಳುತ್ತೇವೆ. ನಗರದಲ್ಲಿ ನಿನ್ನೆಯಿಂದ ಸ್ಪೆಷಲ್ ಡ್ರೈವ್ ಮಾಡಿ ಆರೋಪಿಗಳನ್ನ ಹಿಡಿಯುತ್ತಿದ್ದೇವೆ. ದರೋಡೆ ಮಾಡಿದ್ರೆ ಎಫ್ಐಆರ್ ದಾಖಲು ಮಾಡಿ ಆರೋಪಿಗಳನ್ನ ಬಂಧಿಸುತ್ತೇವೆ .ನಾನು ಈಗಾಗಲೇ ಅಧಿಕಾರಿಗಳ ಜೊತೆ ಮಾಸಿಕ ಸಭೆ ಮಾಡಿದ್ದೇವೆ. ೧೫ ದಿನಗಳಿಂದ ರಾಬರಿ ಕೇಸ್ ಗಳು ಜಾಸ್ತಿಯಾಗಿದೆ…ಕಂಟ್ರೋಲ್ ರೂಂ ಗೆ ಬಂದಿರುವ ದೂರನ್ನ ಪರಿಶೀಲನೆ ಮಾಡ್ತಿದ್ದೇವೆ. ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡಿಲ್ಲ ಅಂದರೆ ಅದಕ್ಕೆ ಇನ್ಸ್ ಪೆಕ್ಟರ್ ಹೊಣೆಯಾಗುತ್ತಾರೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.