Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್’ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಬೆಲೆ ಎಷ್ಟು ಹೆಚ್ಚಾಗ್ಬೋದು? ಪರಿಣಾಮವೇನು ಗೊತ್ತಾ?

02/03/2026 10:08 PM

Good News ; ಗಂಟೆಗಳಲ್ಲೇ ಬದಲಾಯ್ತು ದೃಶ್ಯ, ಚಿನ್ನದ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿತ, ಸಧ್ಯದ ದರ ಹೀಗಿದೆ!

02/03/2026 9:45 PM

ಭಾರತದ ವಿಮಾನಯಾನ ವಲಯದ ಮೇಲೆ ಯುದ್ಧದ ಪರಿಣಾಮ ; 350ಕ್ಕೂ ಹೆಚ್ಚು ವಿಮಾನಗಳು ರದ್ದು!

02/03/2026 9:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?
KARNATAKA

BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?

By kannadanewsnow0916/06/2025 2:52 PM

ಶಿವಮೊಗ್ಗ: ನಿನ್ನೆ ಸಾಗರದ ವಿಜಯನಗರ ಬಡಾವಣೆಯ ಈಜುಕೊಳದ ಸಮೀಪದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ರಶ್ಮಿ ಎಂಬುವರು ಸಾಗರ ಪೇಟೆ ಠಾಣೆಗೆ ತೆರಳಿ, ಸದಾನಂದ ಅವರ ಸಾವಿಗೆ ನನ್ನ ಪತಿ ಗ್ರಾಮ ಲೆಕ್ಕಿಗ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿ ರವೀಂದ್ರ ಕಾಮಾತ್ ಹಾಗೂ ಪ್ರದೀಪ್ ಕಾರಣ ಎಂಬುದಾಗಿ ದೂರು ನೀಡಿದ್ದರು. 

ಈ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 103(1) ಹಾಗೂ 238, 3(5)ರಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಎ.1 ಆರೋಪಿಯಾಗಿ ಸಾಗರದ ವಿಜಯನಗರದ ವೆಂಕಟೇಶ್ ಆಚಾರಿ, ಎ2 ಆರೋಪಿಯಾಗಿ ಸಾಗರ ಎಸ್ ಎನ್ ನಗರದ ರವೀಂದ್ರ ಕಾಮತ್ ಹಾಗೂ ಎ.3 ಆರೋಪಿಯಾಗಿ ವಿಜಯನಗರದ ಪ್ರದೀಪ್ ಎಂಬುವರ ವಿರುದ್ಧ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿದಂತ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರು, ಸದಾನಂದ ಅವರ ಹತ್ಯೆ ಪ್ರಕರಣದಲ್ಲಿ ವಿಎ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿಗಳಾದಂತ ರವೀಂದ್ರ ಕಾಮತ್ ಹಾಗೂ ಪ್ರದೀಪ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆ ಬಳಿಕ ಕಲಂ ನಂ.31ರ ಪ್ರಕಾರ ರವೀಂದ್ರ ಕಾಮತ್, ಪ್ರದೀಪ್ ಅವರಿಗೆ ನೋಟಿಸ್ ನೀಡಿ ಕಳುಹಿಸಲಾಗಿದೆ. ಅಲ್ಲದೇ ದಿನವೂ ಠಾಣೆಗೆ ಬಂದು ಸಹಿ ಮಾಡುವಂತ ಷರತ್ತು ವಿಧಿಸಲಾಗಿದೆ. ಈ ನಿಯಮ ಮೀರಿದರೇ ಅವರನ್ನು ಬಂಧಿಸಲಾಗುತ್ತದೆ. ಈ ಪ್ರಕರಣದಲ್ಲಿ ವೆಂಕಟೇಶ್ ಆಚಾರಿ ಹಾಗೂ ಮೋಹನ್ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರು ಈ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಮಾಹಿತಿ ನೀಡಿದ್ದಾರೆ.

ಸದಾನಂದ ಮರ್ಡರ್ ಕೇಸಲ್ಲಿ ಮೂವರ ವಿರುದ್ಧ ದಾಖಲಾದ ಎಫ್ಐಆರ್ ನಲ್ಲಿ ಏನಿದೆ.?

ದಿನಾಂಕ:-15/06/2025 ರಂದು 11-00 ಎಎಂ ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ವೆಂಕಟೇಶ ಆಚಾರಿ ಗ್ರಾಮ ಲೆಕ್ಕಾಧಿಕಾರಿಯನ್ನು 02 ವರ್ಷದ ಹಿಂದೆ ಮದುವೆಯಾಗಿದ್ದು, ವೆಂಕಟೇಶ ಆಚಾರಿ 02 ದಿನಗಳ ಹಿಂದೆ ಪಿರ್ಯಾದಿಯೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದು, ಪಿರ್ಯಾದಿ ತಾಯಿಯ ತಮ್ಮ ಸದಾನಂದ ಅವರ ಹೆಂಡತಿ ತೀರಿಕೊಂಡ ನಂತರ ಇಂಧಿರಾಗಾಂಧಿ ಕಾಲೇಜು ಹತ್ತಿರ ವಾಸವಾಗಿದ್ದು, ಪಿರ್ಯಾದಿ ಗಂಡ ಮನೆ ಬಿಟ್ಟ ನಂತರ ಸದಾನಂದ ರವರೊಂದಿಗೆ ವಾಸವಾಗಿದರು ಎಂಬುದಾಗಿ ರಶ್ಮಿ ನೀಡಿದಂತ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ: -14/06/2025 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿರ್ಯಾದಿಯವರಿಗೆ ವೆಂಕಟೇಶ ಆಚಾರಿ ಪಿರ್ಯಾದಿಗೆ ಪೋನ್ ಮಾಡಿ ನನ್ನ ಸ್ನೇಹಿತರಾದ ರವೀಂದ್ರ ಕಾಮತ್ ಮತ್ತು ಪ್ರದೀಪ ಇವರ ಸಹಾಯದಿಂದ ಪಿರ್ಯಾದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಪೋನ್ ಮಾಡಿದ ಸಮಯದಲ್ಲಿ ವೆಂಕಟೇಶ ಆಚಾರಿ ಪಿರ್ಯಾದಿ ಸೋದರ ಮಾವನ ಮನೆಯಲ್ಲಿಯೇ ಇರುವುದಾಗಿ ತಿಳಿಸಿದ್ದು, ಈ ಬಗ್ಗೆ ಪಿರ್ಯಾದಿಯವರು ಅವರ ಸೋದರ ಮಾವನೊಂದಿಗೆ ಮಾತನಾಡಿ ನನ್ನ ಗಂಡ ಸರಿ ಇಲ್ಲ. ಅವರ ಸ್ನೇಹ ಬಿಟ್ಟು ಬಿಡು ಎಂದು ಅವರ ಮಾವನಿಗೆ ತಿಳಿಸಿದ್ದು, ನಂತರ ಪಿರ್ಯಾದಿರವರು ಅವರ ಗಂಡ ಮತ್ತು ಅವರ ಸ್ನೇಹಿತರಾದ ರವೀಂದ್ರ ಕಾಮತ್ ಮತ್ತು ಪ್ರದೀಪ ರವರಿಗೆ ಪೋನ್ ಮಾಡಿದಾಗ ಅವರು ಪೋನ್ ಎತ್ತಿರುವುದಿಲ್ಲ ಎಂದಿದ್ದಾರೆ.

ದಿನಾಂಕ:-15/06/2025 ರಂದು ಸುಮಾರು 7-00 ಗಂಟೆ ಸಮಯದಲ್ಲಿ ಪಿರ್ಯಾದಿರವರ ಸೋದರ ಮಾವ ಸದಾನಂದ ಅವರನ್ನು ಯಾರೋ ಕೊಲೆ ಮಾಡಿ ಹೆಣವನ್ನು ವಿಜಯನಗರ ಬಡಾವಣೆಯ ರಸ್ತೆ ಅಂಚಿನಲ್ಲಿ ಬಿಸಾಕಿ ಹೋಗಿರುತ್ತಾರೆ ಎಂಬ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋಗಿ ನೋಡಿದಾಗ ತನ್ನ ಮಾವನ ಹೆಣವನ್ನು ಕಂಡುಬಂದಿದೆ. ಪಿರ್ಯಾದಿ ರವರ ಸೋದರ ಮಾವನನ್ನು ಪಿರ್ಯಾದಿ ಗಂಡ ವೆಂಕಟೇಶ ಆಚಾರಿ, ಎಸ್ ಎನ್ ನಗರದ ರವೀಂದ್ರ ಕಾಮತ್ ಮತ್ತು ವಿಜಯನಗರದ ಪ್ರದೀಪ ರವರು ಕೊಲೆ ಮಾಡಿರುತ್ತಾರೆಂದು ದೂರಿನಲ್ಲಿ ಆರೋಪಿ ವೆಂಕಟೇಶ್ ಆಚಾರಿ ಪತ್ನಿ ರಶ್ಮಿ ಉಲ್ಲೇಖಿಸಿದ್ದಾರೆ.

ಈ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 103(1) ಹಾಗೂ 238, 3(5)ರಡಿಯಲ್ಲಿ ಮೂವರ ವಿರುದ್ಧ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

 

BIG NEWS : ‘KUWS’ ಅಧ್ಯಕ್ಷ ಸ್ಥಾನದಿಂದ ಶಾಸಕ ವಿನಯ್ ಕುಲಕರ್ಣಿಯನ್ನು ತೆಗೆದುಹಾಕುವಂತೆ ಸಿಎಂಗೆ ಆಗ್ರಹ

BREAKING : ಬೆಂಗಳೂರಲ್ಲಿ ರ್‍ಯಾಶ್ ಡ್ರೈವಿಂಗ್ ಪ್ರಶ್ನೆ ಮಾಡಿದ ಮಹಿಳೆಯ ಮೇಲೆ ರ‍್ಯಾಪಿಡೋ ಚಾಲಕನಿಂದ ಹಲ್ಲೆ!

Share. Facebook Twitter LinkedIn WhatsApp Email

Related Posts

ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆಯಂತೆ ಬೆಂಗಳೂರಿನ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಸರ್ಕಾರ ಆದೇಶ

02/03/2026 8:42 PM1 Min Read

ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು

02/03/2026 8:37 PM1 Min Read

ಜೆಡಿಎಸ್ ಗ್ರೇಟರ್ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ: ಪಕ್ಷ ಸಂಘಟಿಸಲು ಸ್ಪಷ್ಟ ನಿರ್ದೇಶನ

02/03/2026 8:17 PM2 Mins Read
Recent News

ಇರಾನ್’ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಬೆಲೆ ಎಷ್ಟು ಹೆಚ್ಚಾಗ್ಬೋದು? ಪರಿಣಾಮವೇನು ಗೊತ್ತಾ?

02/03/2026 10:08 PM

Good News ; ಗಂಟೆಗಳಲ್ಲೇ ಬದಲಾಯ್ತು ದೃಶ್ಯ, ಚಿನ್ನದ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿತ, ಸಧ್ಯದ ದರ ಹೀಗಿದೆ!

02/03/2026 9:45 PM

ಭಾರತದ ವಿಮಾನಯಾನ ವಲಯದ ಮೇಲೆ ಯುದ್ಧದ ಪರಿಣಾಮ ; 350ಕ್ಕೂ ಹೆಚ್ಚು ವಿಮಾನಗಳು ರದ್ದು!

02/03/2026 9:24 PM

BREAKING : ‘ಅಗಾಧ ಸ್ನೇಹ’ : ಇರಾನ್ ಯುದ್ಧದ ನಡುವೆಯೂ ಇಸ್ರೇಲ್ ಜೊತೆ ನಿಂತಿದ್ದಕ್ಕಾಗಿ ಪ್ರಧಾನಿ ಮೋದಿಗೆ ‘ನೆತನ್ಯಾಹು’ ಧನ್ಯವಾದ

02/03/2026 8:56 PM
State News
KARNATAKA

ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆಯಂತೆ ಬೆಂಗಳೂರಿನ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಸರ್ಕಾರ ಆದೇಶ

By kannadanewsnow0902/03/2026 8:42 PM KARNATAKA 1 Min Read

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ ರಸ್ತೆ ಬದಿ ಹಾಗೂ ರಸ್ತೆ ವಿಭಜಕಗಳಲ್ಲಿ…

ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು

02/03/2026 8:37 PM

ಜೆಡಿಎಸ್ ಗ್ರೇಟರ್ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ: ಪಕ್ಷ ಸಂಘಟಿಸಲು ಸ್ಪಷ್ಟ ನಿರ್ದೇಶನ

02/03/2026 8:17 PM

BIG NEWS: ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ

02/03/2026 8:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.