ಚಿಕ್ಕಬಳ್ಳಾಪುರ : ಚುನಾವಣೆಯ ವೇಳೆ ರಾಜ್ಯ ಸರ್ಕಾರದ ಲೆಟರ್ ಹೆಡ್ ನಲ್ಲಿ ವ್ಯವಹಾರ ನಡೆಸಿದ್ದು, ಹಾಗೂ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ಇದೀಗ ಚಿಕ್ಕಬಳ್ಳಾಪುರದ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿರುವ ಡಾ. ಕೆ ಸುಧಾಕರ್ ಅವರ ವಿರುದ್ಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆ ವೇಳೆ ರಾಜ್ಯ ಸರ್ಕಾರದ ಚಿನ್ಹೆಯನ್ನು ಬಳಸಿ ಚುನಾವಣಾ ಆಯುಕ್ತರು ಬೆಂಗಳೂರು ವಿಭಾಗಕ್ಕೆ ಸುಧಾಕರ್ ಅವರು ಪತ್ರ ಬರೆದಿದ್ದರು. ಅಲ್ಲದೆ ಸರ್ಕಾರದ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಅಡಿ ಇದೀಗ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಸರ್ಕಾರದ ಚಿಹ್ನೆ ಇರುವ ಲೆಟರ್ ಹೆಡ್ನಲ್ಲಿ ಚುನಾವಣಾ ಆಯುಕ್ತರು ಮತ್ತು ಬೆಂಗಳೂರು ವಿಭಾಗಕ್ಕೆ ಪತ್ರ ವ್ಯವಹಾರ ಮಾಡಿದ್ದಕ್ಕೆ ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಾಗಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.