ಬೆಂಗಳೂರು: ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಹೋಗುವ ಮಹಿಳೆಗೆ ಯಾವಳೇ ನೀನು ಅಲ್ಲಾಡಿಸಿಕೊಂಡು ಎಂದು ಅವಹೇಳನ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂಥೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ವಿರುದ್ಧ ಮಹಿಳೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ.
ದೂರಿನಲ್ಲಿ ಮಹಿಳೆ ಪ್ರತಿನಿತ್ಯ ಹೋಗುವಂತೆ ನಾನು ಕಚೇರಿ ಕೆಲಸಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ನನಗೆ ಸ್ಕೂಟರ್‌ನಲ್ಲಿ ಹೋಗುವಾಗಿ ಹಿಂಬದಿಯಿಂದ ಅಡ್ಡಬಂದು ಕಿಟಕಿ ಗಾಜು ಇಳಿಸಿ ‘ಯಾವಳೇ ನೀನು ಅಲ್ಲಾಡಿಸಿಕೊಂಡು’ ಎಂದು ಶಿವರಾಜ್ ಕೆ.ಆರ್ ಪೇಟೆ ನಿಂದಿಸಿದ್ದಾರೆ ಅಂಥ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ಅವರು ನನಗೆ ಬೈದು ಸ್ನೇಹಿತರ ಜೊತೆಗೆ ನಗಾಡುತ್ತಾ ಹೋಗಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಅಂದ ಹಾಗೇ ಇತ್ತೀಚಿಗೆ ಕೆಲವು ಕಾಮಿಡಿ ಕಲಾವಿದರು ಹಾಸ್ಯದ ಹೆಸರಿನಲ್ಲಿ ಅಶ್ಲೀಲವನ್ನೇ ಮುಂದಿಟ್ಟುಕೊಂಡು, ಡಬ್ಬಲ್ ಮೀನಿಂಗ್ ಹೇಳಿಕೆ ಮೂಲಕ ಜನರಲ್ಲಿ ಅಸಹ್ಯದ ಭಾವನೆಯನ್ನು ಕೂಡ ಹುಟ್ಟುಹಾಕುತ್ತಿದ್ದಾರೆ ಅಂತ ಆರೋಪ ಮಾಡುತ್ತಿದ್ದಾರೆ.