ಉತ್ತರ ಪ್ರದೇಶ: ಉತ್ತರ ಪ್ರದೇಶದ ಆಗ್ರಾದಿಂದ ಅಕ್ರಮವಾಗಿ ಮರಳು ಸಾಗಾಣೆ ನಡೆಸುತ್ತಿದ್ದ 13 ಟ್ರ್ಯಾಕ್ಟರ್ಗಳು ಟೋಲ್ ಪ್ಲಾಜಾದಲ್ಲಿ ನಿಲ್ಲಿಸದೇ ಬ್ಯಾರಿಕೇಡ್ ಮುರಿದು ಮುಂದೆ ಸಾಗಿರುವ ಘಟನೆ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ, ಆಗ್ರಾ ಹೆದ್ದಾರಿಯೊಂದರ ಟೋಲ್ ಪ್ಲಾಜಾ ಬಳಿ ಬಂದ ಟ್ರ್ಯಾಕ್ಟರ್ ನಿಲ್ಲುತ್ತದೆ ಎಂದು ನಿರೀಕ್ಷಿಸಿದ್ದ ಕಾರ್ಮಿಕರು ಒಮ್ಮೆಲೇ ಆತಂಕಕ್ಕೊಳಗಾಗಿದ್ದಾರೆ. ಅಲ್ಲಿ ಬಂದ ಟ್ರ್ಯಾಕ್ಟರ್ ಬ್ಯಾರಿಕೇಡ್ ಮುರಿದು ಮುಂದೆ ಸಾಗಿದೆ. ಈ ವೇಳೆ ಕೇವಲ 50 ಸೆಕೆಂಡ್ಗಳಲ್ಲಿ ಮರಳು ತುಂಬಿದ ಒಟ್ಟು 13 ಟ್ರ್ಯಾಕ್ಟರ್ಗಳು ಸಾಗಿವೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
#WATCH | Uttar Pradesh: At least 12 sand-laden tractors, belonging to the sand mafia, break toll barricading and speed past, in Saiyan Police Station area in Agra on 4th September.
(Source: CCTV) pic.twitter.com/p2mfPseths
— ANI UP/Uttarakhand (@ANINewsUP) September 5, 2022
ಭಾನುವಾರ ಆಗ್ರಾ ಗ್ವಾಲಿಯರ್ ಹೆದ್ದಾರಿಯ ಜಜೌ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಏತನ್ಮಧ್ಯೆ, ಪೊಲೀಸರು ಕೂಡ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ತನಿಖೆ ಆರಂಭಿಸಿದ್ದಾರೆ.
BIGG NEWS: ಮೈಸೂರಿನಲ್ಲಿ ಭಾರಿ ಮಳೆಗೆ ನಿಲ್ಲದ ಅವಾಂತರ; 50ಕ್ಕೂ ಹೆಚ್ಚು ಶೇಡ್ಗಳಿಗೆ ನುಗ್ಗಿದ ನೀರು
BREAKING NEWS: ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ ಪ್ರಧಾನಿ ʻಶೇಖ್ ಹಸೀನಾʼ| Sheikh Hasina arrives in India