ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಸುಮಾರು ಎರಡೂವರೆ ಲಕ್ಷ ಬೋಗಸ್ ಕಾರ್ಡ್ಗಳನ್ನು ಕೂಡಲೇ ರದ್ದು ಪಡಿಸುವಂತೆ ಅಧಿಕಾರಿಗಳಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದ್ದಾರೆ. ಕಾರ್ಮಿಕ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮ 2024 ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರೂ.
ರಾಜ್ಯಾದ್ಯಂತ ಕಾರ್ಮಿಕರಿಗೆ 46 ಲಕ್ಷ ಕಾರ್ಡ್ ನೀಡಲಾಗಿದೆ. ಅದರಲ್ಲಿ 2.5 ಲಕ್ಷ ಬೋಗಸ್ ಎಂದು ತಿಳಿದುಬಂದಿದೆ. ಹಾಗಾಗಿ ಬೋಗಸ್ ಕಾರ್ಡ್ಗಳನ್ನು ರದ್ದು ಮಾಡಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ರಾಜ್ಯದ ಎಲ್ಲಾ ತಾಲೂಕುಗಳಿಂದ 2 ರಿಂದ 3 ಲಕ್ಷಸದಸ್ಯರು ನೋಂದಣಿ ಆಗಿದ್ದಾರೆ.
ಆದರೆ ಅಷ್ಟು ಜನರಲ್ಲಿ ಕೇವಲ 30 ಸಾವಿರ ಸದಸ್ಯರಿಗೆ ಮಾತ್ರ ಗ್ರಾಚ್ಯುಟಿ ಬಗ್ಗೆ ತಿಳುವಳಿಕೆ ಇದೆ.ಉಳಿದವರಿಗೆ ಯಾಕೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರಲ್ಲದೇ, 46 ಲಕ್ಷ ಕಾರ್ಮಿಕರ ಬಗ್ಗೆ ಯಾರು ಹೊಣೆಗಾರರಾಗುತ್ತೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.