ನವದೆಹಲಿ: ಕೆನರಾ ಬ್ಯಾಂಕ್(Canara Bank) 666 ದಿನಗಳ ಅವಧಿಗೆ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಪರಿಚಯಿಸಿದ್ದು, ಅದು ಶೇ.7.50 ಬಡ್ಡಿದರವನ್ನು ಒದಗಿಸುತ್ತದೆ.
ಹೌದು, ಈ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7% ಬಡ್ಡಿದರವನ್ನು ನೀಡುತ್ತಿದೆ. ಆದರೆ, ಹಿರಿಯ ನಾಗರಿಕರು ಈ ಸ್ಥಿರ ಠೇವಣಿ ಯೋಜನೆಯಲ್ಲಿ 7.5% ಬಡ್ಡಿಯನ್ನು ಪಡೆಯುತ್ತಾರೆ. ಈ ವಿಶೇಷ ಅವಧಿಯ ಠೇವಣಿ ಯೋಜನೆಯು 2 ಕೋಟಿ ರೂ.ಗಿಂತ ಕಡಿಮೆ ಮೊತ್ತವಾಗಿದೆ.
ಕೆನರಾ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಹೊಸ 666 ದಿನಗಳ ಅವಧಿಯ ಯೋಜನೆಯನ್ನು ಪ್ರಾರಂಭಿಸುವ ಕುರಿತು ತಿಳಿಸುವ ಇನ್ಫೋಗ್ರಾಫಿಕ್ ಅನ್ನು ಹಂಚಿಕೊಂಡಿದೆ. ಅದರಲ್ಲಿ ʻಈಗ ನಿಮ್ಮ ಹೂಡಿಕೆಯ ಮೇಲೆ ಗರಿಷ್ಠ ಆದಾಯವನ್ನು ಪಡೆಯಿರಿ! 666 ದಿನಗಳವರೆಗೆ ಹೂಡಿಕೆ ಮಾಡುವ ಮೂಲಕ 7.50% ಬಡ್ಡಿಯನ್ನು ನೀಡುವ ಕೆನರಾ ವಿಶೇಷ ಠೇವಣಿ ಯೋಜನೆಯನ್ನು ಪ್ರಸ್ತುತಪಡಿಸಲಾಗುತ್ತಿದೆʼ ಎಂದು ಮಾಹಿತಿ ನೀಡಿದೆ.
Now get maximum returns on your investment!
Presenting Canara Special Deposit Scheme that offers 7.50% interest by investing for 666 days. #CanaraBank #CanaraBankSpecialDepositScheme #666Days pic.twitter.com/I2WEoHzVQr
— Canara Bank (@canarabank) October 7, 2022
ಕೆನರಾ ಚಿಲ್ಲರೆ ಉತ್ಸವ
ಹಬ್ಬದ ಸೀಸನ್ಅನ್ನು ಆಚರಿಸುತ್ತಿರುವ ಕೆನರಾ ಬ್ಯಾಂಕ್ ಗೃಹ ಸಾಲ ಮತ್ತು ಕಾರು ಸಾಲಗಳ ಮೇಲೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದೆ. ಇದಲ್ಲದೆ, ಬ್ಯಾಂಕ್ ದಾಖಲಾತಿ ಮತ್ತು ಸಂಸ್ಕರಣಾ ಶುಲ್ಕಗಳ ಮೇಲೆ ಸಂಪೂರ್ಣ ಮನ್ನಾವನ್ನು ನೀಡುತ್ತಿದೆ. ಗ್ರಾಹಕರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ವೈಯಕ್ತಿಕ ಸಾಲಗಳ ತ್ವರಿತ ಅನುಮೋದನೆಯನ್ನು ಪಡೆಯಬಹುದು. ಕಡಿಮೆ EMI, ಆಕರ್ಷಕ ಬಡ್ಡಿದರಗಳು ಈ ಯೋಜನೆಯ ಪ್ರಯೋಜನಗಳಾಗಿವೆ.
Here’s another reason to enjoy this festive season! Presenting #CanaraRetailUtsav which offers a full waiver on documentation and processing charges on #HomeLoan and #CarLoan along with an attractive rate of interest. Apply online and get instant approval: https://t.co/LCEakLBElH pic.twitter.com/cSGXWyvxjW
— Canara Bank (@canarabank) October 4, 2022
ಸಾಲದ ದರ ಹೆಚ್ಚಿಸಿದ ಕೆನರಾ ಬ್ಯಾಂಕ್
ರೆಪೋ ಲಿಂಕ್ಡ್ ಲೆಂಡಿಂಗ್ ದರ (ಆರ್ಎಲ್ಎಲ್ಆರ್) ಮತ್ತು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ಅನ್ನು ಇತರ ಬ್ಯಾಂಕ್ಗಳ ನಂತರ ಹೆಚ್ಚಿಸಲು ಬ್ಯಾಂಕ್ ಈ ಹಿಂದೆ ಘೋಷಿಸಿತು. ಪರಿಷ್ಕೃತ ದರವು ಅಕ್ಟೋಬರ್ 7, 2022 ರಿಂದ ಜಾರಿಗೆ ಬಂದಿದೆ. ಬ್ಯಾಂಕ್ ಎಲ್ಲಾ ಅವಧಿಗಳಲ್ಲಿ MCLR ಮತ್ತು RLLR ಅನ್ನು ಹೆಚ್ಚಿಸಿದೆ. ಆರ್ಬಿಐ ಕೆಲವು ದಿನಗಳ ಹಿಂದೆ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
BIGG NEWS : ರಾಜ್ಯದ 5,8 ನೇ ತರಗತಿಗೆ `ಬೋರ್ಡ್ ಪರೀಕ್ಷೆ’ ಇಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ
BIG NEWS : ಇಂದು ಭಾರತದ ಮೊದಲ ʻಸೌರಶಕ್ತಿ ಚಾಲಿತ ಗ್ರಾಮʼ ಗುಜರಾತ್ನ ʻಮೊಧೇರಾʼ ಎಂದು ಘೋಷಿಸಲಿರುವ ಪ್ರಧಾನಿ ಮೋದಿ