ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಯಾರೊಬ್ಬರ ಸ್ಥಳವನ್ನ ಅವರ ಫೋನ್ ಸಂಖ್ಯೆಯ ಮೂಲಕ ಟ್ರ್ಯಾಕ್ ಮಾಡಲು ಬಯಸುವಿರಾ? ಅನೇಕ ಜನರು ಇದೇ ಕಲ್ಪನೆಯಲ್ಲಿಯೇ ವಾಸಿಸುತ್ತಾರೆ. ಗೆಳತಿ / ಗೆಳೆಯನ ಸ್ಥಳವನ್ನ ಟ್ರ್ಯಾಕ್ ಮಾಡಲು ಅಥವಾ ವ್ಯಕ್ತಿಯ ಲೈವ್ ಸ್ಥಳವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಅದ್ರಂತೆ, ಅಂತಹ ವಿಧಾನಗಳಿಗಾಗಿ ಅನೇಕ ಜನರು Googleನಲ್ಲಿ ಹುಡುಕುತ್ತಲೇ ಇರುತ್ತಾರೆ. ಅಂತಹ ದಾರಿ ಹುಡುಕುತ್ತಾ ಹೊರಟರೆ, ನೀವು ಜಟಿಲವಾಗಿ ಚಲಿಸುತ್ತಲೇ ಇರ್ಬೇಕಾಗುತ್ತೆ. ಯಾವುದೇ ಸಮಂಜಸವಾದ ಮಾರ್ಗವನ್ನ ನೀವು ಕಾಣುವುದಿಲ್ಲ.
ಹಾಗಾದ್ರೆ, ಫೋನ್ ನಂಬರ್ ಮೂಲಕ ಸ್ಥಳ ಪರಿಶೀಲಿಸಲು ಸಾಧ್ಯವಿಲ್ಲವೇ? ಇಲ್ಲ, ಹಲವು ವಿಧಾನಗಳಿವೆ. ಆದ್ರೆ, ನೀವು ಅವುಗಳನ್ನ ಪ್ರವೇಶಿಸೋಕೆ ಕಷ್ಟ. ಹಾಗಾದ್ರೆ, ಪೊಲೀಸರು ಮಾಡೋದೇನು? ಮೊಬೈಲ್ ಸಂಖ್ಯೆಯಿಂದ ಇನ್ನೊಬ್ಬರ ಫೋನ್ ಹೇಗೆ ಟ್ರ್ಯಾಪ್ ಮಾಡುವುದು? ಮುಂದೆ ಓದಿ.
ಪತ್ತೇದಾರಿ ತಂತ್ರಾಂಶ
ನೀವು ಪೆಗಾಸಸ್ ಹೆಸರನ್ನ ಕೇಳಿರಬೇಕು. ಇದು ಸ್ಪೈವೇರ್ ಆಗಿದೆ, ಇದರ ಸಹಾಯದಿಂದ ಯಾರನ್ನಾದರೂ ಸರಿ, ಆತನಿಗೆ ಅರಿವಿಲ್ಲದೇ ಬೇಹುಗಾರಿಕೆ ಮಾಡಬಹುದು. ಆದರೆ ಇದು ಯಾವುದೇ 100 ಅಥವಾ ಸಾವಿರ ರೂಪಾಯಿಯ ಸಾಫ್ಟ್ವೇರ್ ಅಲ್ಲ. ಇದನ್ನ ಅನೇಕ ದೇಶಗಳ ಮಿಲಿಟರಿ ಮತ್ತು ಸರ್ಕಾರಗಳು ಬಳಸುತ್ತಿದ್ದವು. ಆದ್ರೆ, ವಿಷ್ಯ ಬೆಳಕಿಗೆ ಬಂದ ನಂತ್ರ ಈ ಸಾಫ್ಟ್ವೇರ್ ನಿಷೇಧಿಸಲಾಗಿದೆ. ಆದ್ರೆ, ನೀವು ಗೂಗಲ್ ಸರ್ಚ್ನ ಸಹಾಯವನ್ನು ತೆಗೆದುಕೊಂಡರೆ, ಅಂತಹ ಹಲವಾರು ನಕಲಿ ಸಾಫ್ಟ್ವೇರ್ ನಿಮ್ಮ ಕೈಸೇರುತ್ವೆ. ಈ ಸಾಫ್ಟ್ವೇರ್ʼಗಳು ನಿಮ್ಮ ಫೋನ್ನಿಂದ ಡೇಟಾವನ್ನು ಕದಿಯಲು ಮಾತ್ರವಲ್ಲ, ನಿಮಗೆ ತಪ್ಪು ಮಾಹಿತಿಯನ್ನು ನೀಡುತ್ವೆ.
ಹಾಗಾದರೆ ಪೊಲೀಸರು ಹೇಗೆ ಕೆಲಸ ಮಾಡುತ್ತಾರೆ?
ಯಾರನ್ನಾದರೂ ಟ್ರ್ಯಾಕ್ ಮಾಡಲು ಪೊಲೀಸರು ಅವರ ಮೊಬೈಲ್ ಸಂಖ್ಯೆ ಅಥವಾ ಫೋನ್ನ IMEI ಸಂಖ್ಯೆಯನ್ನು ಸಹ ಬಳಸುತ್ತಾರೆ. ಇದಕ್ಕಾಗಿ ಪೊಲೀಸರು ಟೆಲಿಕಾಂ ಕಂಪನಿಯೊಂದಿಗೆ ಕಾರ್ಯಾಚರಣೆ ನಡೆಸುತ್ತಾರೆ.
ಸೆಲ್ ಟವರ್ ಬಳಿ ಮತ್ತು ಎಷ್ಟು ದೂರದಲ್ಲಿ ಟ್ರ್ಯಾಕಿಂಗ್ ಸಂಖ್ಯೆ ಸಕ್ರಿಯವಾಗಿದೆ ಎಂದು ಟೆಲಿಕಾಂ ಕಂಪನಿ ಪೊಲೀಸರಿಗೆ ತಿಳಿಸುತ್ತದೆ. ಇದರೊಂದಿಗೆ, ಪೊಲೀಸ್ ತಂಡವು ಅಪರಾಧಿಗಳ ಸ್ಥಳದ ಬಗ್ಗೆ ಬಹುತೇಕ ಮಾಹಿತಿಯನ್ನ ಪಡೆಯುತ್ತದೆ.