ಉತ್ತರಕನ್ನಡ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದಲ್ಲಿ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಅವರಿಗೆ ಮಗನೇ ಎನ್ನದೇ ಬೇರೆನು ಹೇಳಲು ಸಾಧ್ಯ? ಅಪ್ಪ ಅಂತಲೋ, ಅಜ್ಜ ಅಂತಲೋ, ಮಾಮಾ ಅಂತಲೋ ಕರಿಯಲು ಸಾಧ್ಯವೇ? ಎಂದು ಸಂಸದ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯುದ್ಧದ ಸಮಯದಲ್ಲಿ ಯಾವ ಭಾಷೆ ಬಳಸಬೇಕು ಅದನ್ನೇ ಬಳಸಬೇಕು ಅಲ್ಲಿ ಶಾಸ್ತ್ರೀಯ ಸಂಗೀತ ಬಳಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಅಲ್ಲದೆ ದೇಶದಲ್ಲಿ ಇಸ್ಲಾಂ ಧರ್ಮ ಇರುವವರಿಗೂ ನಮಗೆ ನೆಮ್ಮದಿ ಇಲ್ಲ. ಹೇಳಿಕೆ ನೀಡುವುದರಿಂದ ನನಗೇನು ಹೆದರಿಕೆ ಇಲ್ಲ. ಈಗ ಮೊನ್ನೆ ತಾನೆ ಮುಸ್ಲಿಂ ಧರ್ಮದ ಕುರಿತಾಗಿ ಹೇಳಿಕೆಗೆ FIR ದಾಖಲಾಗಿದೆ. ಸಿದ್ದರಾಮಯ್ಯ ಬಗ್ಗೆ ಹೇಳಿದಾಗ ಎಲ್ಲಾ ಮಸೀದಿಗಳು ಅಂತ ಹೇಳಿದ್ನಲ್ಲ ಆ ಸಂಬಂಧ ಒಂದು ಕೇಸ್ ಹಾಕಿದ್ದಾರೆ ಎಂದರು.
ಮಸೀದಿಯ ಬಗ್ಗೆ ಹೇಳಿದ್ದ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಸಿದ್ಧರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದೇನೆ. ತುಂಬಾ ವರ್ಷದಿಂದ ಯಾವುದೇ ಕೇಸ್ ಇರಲಿಲ್ಲ. ಒಂದು ರೀತಿಯ ಮುಜುಗುರ ಉಂಟಾಗಿತ್ತು. ಏನೋ ಕಳೆದುಕೊಂಡಂತೆ ಅನಿಸುತ್ತಿತ್ತು. ಈಗ ಪುನಃ ವಾಪಾಸ್ ಬಂದ ಅನುಭವ ಆಗುತ್ತಿದೆ ಎಂದರು.
ಆಸ್ಕರ್ ಪ್ರಶಸ್ತಿ ವಿಜೇತ RRR ಸಿನಿಮಾದ ಛಾಯಾಗ್ರಾಹಕ ಸೆಂಥಿಲ್ ಕುಮಾರ್‌ಗೆ ‘ಪತ್ನಿ ವಿಯೋಗ’
ಚಾಮರಾಜನಗರ : ‘ಕರಿಮಣಿ ಮಾಲೀಕ ನೀನಲ್ಲ’ : ಪತ್ನಿಯ ರೀಲ್ಸ್ ಗೆ ಮನನೊಂದು ಪತಿ ಆತ್ಮಹತ್ಯೆ
BREAKING:ಮಣಿಪುರದಲ್ಲಿ ಮತ್ತೆ ಹಿಂಸಾಚಾರ,300 ಜನರಿಂದ ಪೋಲಿಸ್ ಠಾಣೆಗೆ ದಾಳಿ,ಒಬ್ಬ ಸಾವು ಹಲವರಿಗೆ ಗಾಯ