ಮಂಗಳೂರು: ಮುಂಬರುವ ಚುನಾವಣೆಗೆ ರಾಜಕೀಯ ಕ್ಷೇತ್ರದಲ್ಲಿ ಚಟುವಟಿಕೆಗಳು ಶುರುವಾಗಿದೆ. ಇಷ್ಟು ದಿನ ಸಿಎಂ ಬದಲಾವಣೆ ಕುರಿತು ಎದ್ದಿದ್ದ ಚರ್ಚೆ ಈಗ ತಣ್ಣಗಾಗಿದೆ. ಇದೀಗ ಮತ್ತೊಂದು ಹುದ್ದೆಯ ಬದಲಾವಣೆಯ ಕೂಗು ಶುರುವಾಗಿದೆ. ಕರಾವಳಿಯಲ್ಲಿ ನಳೀನ್ ಕುಮಾರ್ ಕಟೀಲು ವಿರುದ್ಧ ಅಲೆ ಎದ್ದಿದೆ.
ಈಗ ಸ್ಥಳೀಯ ನಾಯಕರು ನಳೀನ್ ಕುಮಾರ್ ಕಂಡ್ರೆ ಉರಿದು ಬೀಳುತ್ತೀದ್ದಾರಾ ಎಂಬ ಪ್ರಶ್ನೆ ಕಾಡತೊಡಗಿದೆ. ಈಗ ಕಟೀಲು ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಹಸ ಅಭಿಯಾನ ಶುರುವಾಗಿದೆ. ಪ್ರಧಾನಿ ಮೋದಿ ಸ್ವಾಗತಕ್ಕೂ ಮೊದಲು ಕಿಚ್ಚು ಸ್ಫೋಟ ಗೊಂಡಿದೆ. ಬಿಜೆಪಿ ರಾಜ್ಯಾಧಕ್ಷ ಸ್ಥಾನ ಮತ್ತು ದಕ್ಷಿಣ ಕನ್ನಡ ಸಂಸದ ಸ್ಥಾನ ಬದಲಿಸುವಂತೆ ಹೊಸ ಅಭಿಯಾನ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ವಾರ್ ನಡೆಯುತ್ತಿದೆ. ಸತ್ಯಜಿತ್ ಸುರತ್ಕಲ್ ಸಂಸದ ಆಗಬೇಕೆಂದು ತೀವ್ರ ಚರ್ಚೆ ಆಗುತ್ತಿದೆ.