ಪೊಯಿಪೆಟ್: ಕಾಂಬೋಡಿಯಾದ ಪೊಯ್ಪೆಟ್ ವಿಲೇಜ್ ನಲ್ಲಿರುವ ಗ್ರ್ಯಾಂಡ್ ಡೈಮಂಡ್ ಕ್ಯಾಸಿನೊದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬುಧವಾರ ರಾತ್ರಿ 11.30ರ ಸುಮಾರಿಗೆ ಪೊಯ್ಪೆಟ್ನ ಗ್ರ್ಯಾಂಡ್ ಡೈಮಂಡ್ ಸಿಟಿ ಕ್ಯಾಸಿನೋ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕಾಂಬೋಡಿಯನ್ ಪೊಲೀಸರು ತಿಳಿಸಿದ್ದಾರೆ.
ಹಲವಾರು ಗಂಟೆಗಳ ಕಾಲ ಬೆಂಕಿ ಹೊತ್ತಿಕೊಂಡಿದ್ದರಿಂದ ಸುಮಾರು 50 ಜನರು ಪೊಯಿಪೇಟ್ನ ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್ನಲ್ಲಿ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ. ಬೆಂಕಿ ಹೊತ್ತಿಕೊಂಡಾಗ ವಿದೇಶಿ ಪ್ರಜೆಗಳು ಕ್ಯಾಸಿನೋದೊಳಗೆ ಇದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕ್ಯಾಸಿನೋದಲ್ಲಿ ಸುಮಾರು 400 ಜನರು ಕೆಲಸ ಮಾಡುತ್ತಿದ್ದಾರೆ , “ಸುಮಾರು 10 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ” ಎಂದು ಎಎಫ್ಪಿ ನೋಡಿದ ತಾತ್ಕಾಲಿಕ ಪೊಲೀಸ್ ವರದಿ ತಿಳಿಸಿದೆ.
ಆನ್ ಲೈನ್ ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ತುಣುಕುಗಳು ಬೃಹತ್ ಹೋಟೆಲ್ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ತೋರಿಸುತ್ತವೆ, ಕೆಲವು ತುಣುಕುಗಳು ಜನರು ಸುಡುವ ಕಟ್ಟಡದಿಂದ ಜಿಗಿಯುವುದನ್ನು ತೋರಿಸುತ್ತವೆ.
Jumpers from the fifth floor of the Grand Diamond City Hotel and Casino, Poipet, Cambodia. Fire has been uncontrolled for more than 6 hours. pic.twitter.com/gCdqfRKEEN
— Tessaron News (@TessaronF) December 29, 2022
ಸ್ಥಳೀಯ ಅಧಿಕಾರಿಗಳು ಗಾಯಗೊಂಡವರನ್ನು ಥಾಯ್ಲೆಂಡ್ನ ಸಾ ಕೈಯೋ ಪ್ರಾಂತ್ಯದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಥಾಯ್ ವಿದೇಶಾಂಗ ಸಚಿವಾಲಯದ ಮೂಲಗಳು ಎಎಫ್ಪಿಗೆ ತಿಳಿಸಿವೆ.