ಪಂಜಾಬ್ : ಹೆಂಡತಿ ತನ್ನ ಗಂಡನನ್ನು ನಪುಂಸಕ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ. ಅಥವಾ ಅವಳು ನಪುಂಸಕನಿಗೆ ಜನ್ಮ ನೀಡಿದ್ದಾಳೆಂದು ಆತನ ತಾಯಿಗೆ ಹೇಳುವುದು ಕ್ರೂರವಾದದ್ದು ಎಂದು ಪಂಜಾಬ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣ ಏನು?
ಮಹಿಳೆಯೊಬ್ಬಳು ಮೊಬೈಲ್ ನಲ್ಲಿ ಗಂಟೆಗಟ್ಟಲೆ ಅಶ್ಲೀಲ ವಿಡಿಯೋ ನೋಡಿ, ಪತಿಯ ಬಳಿ ಪ್ರತಿ ರಾತ್ರಿ ತನ್ನೊಂದಿಗೆ ಮೂರು ಬಾರಿ 10-15 ನಿಮಿಷಗಳ ಕಾಲ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಳಂತೆ.ಇದಕ್ಕೆ ಒಪ್ಪದ ಪತಿಯನ್ನು ನಪುಂಸಕ ಅಂತಾ ಹೀಯಾಳಿಸುತ್ತಾಳಂತೆ. ಇದರಿಂದ ಬೇಸತ್ತ ಪತಿ ಪಂಜಾಬ್ ಹರಿಯಾಣ ಹೈಕೋರ್ಟ್‍ಗೆ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾನೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರಿದ್ದ ನ್ಯಾಯಪೀಠವು ಈ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿ, ಹೆಂಡತಿ ತನ್ನ ಗಂಡನನ್ನು ನಪುಂಸಕ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ. ಪತಿಯನ್ನು ನಪುಂಸಕ ಅಂತಾ ಕರೆಯುವುದು ಅಥವಾ ಅವಳು ನಪುಂಸಕನಿಗೆ ಜನ್ಮ ನೀಡಿದ್ದಾಳೆಂದು ತಾಯಿಗೆ ಹೇಳುವುದು ಕ್ರೂರವಾದದ್ದು ಅಂತಾ ಹೈಕೋರ್ಟ್ ತೀರ್ಪು ನೀಡಿದೆ.
ಇದಕ್ಕೂ ಮುನ್ನ ಜುಲೈ 12ರಂದು ಕೌಟುಂಬಿಕ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿತ್ತು. ಮಹಿಳೆಯ ಅತ್ತೆ ಸೊಸೆ ನನ್ನ ಮಗನನ್ನು ನಪುಂಸಕ ಎಂದು ಕರೆದಿದ್ದಾಳೆ ಅಂತಾ ಆರೋಪಿಸಿದ್ದರು.ಅದೇ ರೀತಿ ಪತಿ ಮತ್ತು ಅತ್ತೆಯ ಹೇಳಿಕೆಯನ್ನು ಕುಟುಂಬ ನ್ಯಾಯಾಲಯವು ಒಪ್ಪಿಕೊಂಡಿದ್ದು, ಪತಿಯ ಪರವಾಗಿ ತೀರ್ಪು ನೀಡಿತ್ತು.