ಬೆಂಗಳೂರು : ಪರಿಷತ್ ನಲ್ಲಿ ಇವ ನಮ್ಮ ಇವ ನಮ್ಮ ವಿಧೇಯಕ ಮೇಲೆ ಇಂದು ಚರ್ಚೆ ನಡೆಯಿತು ಕರ್ನಾಟಕ ವಿವಾಹದಲ್ಲಿ ಆಯ್ಕೆ ಸ್ವಾತಂತ್ರ ಹಾಗೂ ಮರ್ಯಾದೆ ಮತ್ತು ಸಂಪ್ರದಾಯ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ಬಿಲ್ ಮೇಲೆ ಚರ್ಚೆ ನಡೆಯಿತು. ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬ್ರಾಹ್ಮಣರನ್ನೇ ನಾವು ಜಾತಿವಾದಿ ಅಂತ ಹೇಳುವುದು ಎಂದು ಮಾತು ಆರಂಭಿಸಿದರು.
ಯಲ್ಲಾಪುರದಲ್ಲಿ ಪ್ರೀತಿಸುವಂತೆ ಮಹಿಳೆಯನ್ನು ಓರ್ವ ಪೀಡಿಸುತ್ತಿದ್ದ. ಆಕೆ ನನಗೆ ಇಷ್ಟ ಇಲ್ಲ ಅಂತ ಹೇಳಿದ್ದಕ್ಕೆ ಕೊಂದುಬಿಟ್ಟ. ಸ್ವಾಮೀಜಿಗಳನ್ನು ನಾವು ದ್ವೇಷ ಮಾಡುವುದಿಲ್ಲ ನಾನು ಹುಟ್ಟಿದ ಮೇಲೆ ಜಾತಿ ವ್ಯವಸ್ಥೆ ಇದೆ ಅಂತ ಗೊತ್ತಾಯ್ತು. ನಮ್ಮೂರಿನ ದೇವಸ್ಥಾನವನ್ನೇ ನಾನು ನೋಡಿಲ್ಲ. ಶೇವಿಂಗ್ ಮಾಡಿಸಲು ಕಟಿಂಗ್ ಶಾಪ್ ಗೆ ಹೋದರೆ ಬೈದು ಕಳುಹಿಸಿದರು. ಯಾರ ಬಳಿಯು ಶೇವಿಂಗ್ ಮಾಡಿಸಲ್ಲ ನಾನೇ ಮಾಡಿಕೊಳ್ಳುತ್ತೇನೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ನೀಡಿದರು.








