ಕಲಬುರ್ಗಿ : ಕಲ್ಬುರ್ಗಿ ವಿಭಾಗೀಯ ಕಚೇರಿಯ ಜೆಇ ಸುನಿಲ್ ಹಕ್ಕಿ ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಾರೆ. ಕಳೆದ ಭಾನುವಾರದಿಂದ ಪಿಡಬ್ಲ್ಯೂಡಿ ಇಂಜಿನಿಯರ್ ಸುನಿಲ್ ಹಕ್ಕಿ ನಾಪತ್ತೆಯಾಗಿದ್ದಾರೆ. ಮಾರ್ಚ್ 15 ಮಧ್ಯಾಹ್ನ 12 ಗಂಟೆಗೆ ಸುನಿಲ್ ಮನೆಯಿಂದ ಹೋಗಿದ್ದಾರೆ.
ತಾಯಿಯ ಬಳಿ 15,000 ಹಣ ತೆಗೆದುಕೊಂಡು ಸುನಿಲ್ ಮನೆ ಬಿಟ್ಟು ಹೋಗಿದ್ದಾರೆ ಮೊಬೈಲ್ ಮನೆಯಲ್ಲಿ ಬಿಟ್ಟು ಆಫೀಸ್ಗೆ ಹೋಗುವುದಾಗಿ ಹೇಳಿದ್ದರು. ಮೊಬೈಲ್ ತೆಗೆದುಕೊಂಡು ಹೋಗುವಂತೆ ತಾಯಿ ಹೇಳಿದರೂ ಕೂಡ ಬಹಳ ಕಾಲ್ಗಳು ಬರುತ್ತವೆ ಬೇಡ ಅಂತ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.
ವಾಪಸ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಸುನಿಲ್ ಗಾಗಿ ಹುಡುಕಾಟ ನಡೆಸಿದ್ದಾರೆ ಸುನಿಲ್ ಅತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಕುಟುಂಬಸ್ಥರು ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂ ಪಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಪಿಡಬ್ಲ್ಯೂಡಿ ಇಂಜಿನಿಯರ್ ನಾಪತ್ತೆಯಾಗಿದ್ದಾರೆ.








