ಬಳ್ಳಾರಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್ಐಎ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತಿದ್ದು ಶಂಕಿತ ಉಗ್ರ ಬಸ್ ಮೂಲಕ ತುಮಕೂರು ಮಾರ್ಗವಾಗಿ ಬಳ್ಳಾರಿಗೆ ಪ್ರಯಾಣಿಸಿ ದರ ಕುರಿತು ಮಾಹಿತಿ ಬಂದಿದೆ ಎನ್ನಲಾಗಿದೆ.
ಮಾ.9ರಂದು ‘ರಾಜ್ಯ ಸರ್ಕಾರ’ದಿಂದ ‘ರೈತ ಸೌರಶಕ್ತಿ ಮೇಳ’ ಆಯೋಜನೆ: ಏನಿರುತ್ತೆ ಗೊತ್ತಾ? ಇಲ್ಲಿದೆ ಡೀಟೆಲ್ಸ್
ಈ ಹಿನ್ನೆಲೆಯಲ್ಲಿ ಶಂಕಿತ ಉಗ್ರನ ಬೆನ್ನತ್ತಿದ ಎನ್ಐಎ ತಂಡ ಬಳ್ಳಾರಿ ಕೇಂದ್ರ ನಿಲ್ದಾಣದಿಂದ ಬಸ್ ಬದಲಾಯಿಸಿ ಪ್ರಯಾಣಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಶಂಕಿತ ಉಗ್ರ ಆಗಮನದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಇದೀಗ NIA ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ.ನಿನ್ನೆ ತಡರಾತ್ರಿಯಿಂದ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರ.
ರಂಜಾನ್ ಹಿನ್ನೆಲೆ : ರಾಜ್ಯದ ಉರ್ದು ಶಾಲೆಗಳ ವೇಳಾಪಟ್ಟಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
ನಿನ್ನೆ ತುಮಕೂರು ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ NIA ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ನಿನ್ನೆ ತಡರಾತ್ರಿ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ.ಅಲ್ಲಿ ಸತತವಾಗಿ ಒಂಬತ್ತು ಗಂಟೆಗಳಿಂದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
‘ಪುನೀತ್ ರಾಜಕುಮಾರ್’ ಹೆಸರಲ್ಲಿ ರಾಜ್ಯಾದ್ಯಂತ ‘ಹೃದಯ ಜ್ಯೋತಿ’ ಯೋಜನೆ ಪ್ರಾರಂಭ : ದಿನೇಶ್ ಗುಂಡೂರಾವ್