ಹುಬ್ಬಳ್ಳಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, NIA ಕಠಿಣ ಪರಿಶ್ರಮದಿಂದ ಉಗ್ರರ ಬಂಧನವಾಗಿದೆ. ಆದರೆ ಕಾಂಗ್ರೆಸ್ ಜನರ ಜೀವ ಹಾಗೂ ಹೆಣದ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.
ಬೆಂಗಳೂರು : ‘BMTC’ ಬಸ್ ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಮೊಬೈಲ್ ಕಳ್ಳತನ : ಬಲೆಗೆ ಬಿದ್ದ ‘ಗೋಕವರಂ’ ಗ್ಯಾಂಗ್
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಹೆಣದ ಮೇಲೆ ರಾಜಕಾರಣ ಮಾಡುತ್ತಿದೆ.ಗುಪ್ತಚರ ಇಲಾಖೆ ಶ್ರಮಪಟ್ಟು ಮಾಹಿತಿ ಸಂಗ್ರಹಿಸಿ ಎನ್ಐಎಗೆ ಮಾಹಿತಿ ನೀಡಿದೆ. ರಾಮೇಶ್ವರಂ ಕೆಫೆಯಲ್ಲಿ ಸ್ಪೋಟವಾದಾಗ ದಾರಿ ತಪ್ಪಿಸುವ ಕೆಲಸ ನಡೆದಿತ್ತು. ಸಿಲಿಂಡರ್ ಫೋಟೋ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದು ಡಿಸಿಎಂ ಹಾಗೂ ಗೃಹ ಸಚಿವರು ತನಿಖೆಯ ದಾರಿ ತಪ್ಪಿಸುವ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.
ಸರ್ಕಾರದ ವರ್ತನೆಯಿಂದ ಇಂತಹ ಘಟನೆಗಳಿಗೆ ಕುಮ್ಮಕ್ಕು ಸಿಗುತ್ತಿದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಎನ್ ಐ ಎ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ ಹಾರಲು ಮುಂದಾಗಿದ್ದವರ ಉಗ್ರರನ್ನು ಇದೀಗ ಬಂದಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅವಿದಿದ್ದ ಆರೋಪಿಗಳನ್ನು ಎಳೆದು ತಂದಿದೆ. ಆದರೆ ಕಾಂಗ್ರೆಸ್ ಜನರ ಜೀವ ಹಣದ ಮೇಲೆ ರಾಜಕಾರಣ ಮಾಡುತ್ತಿದೆ ಈಗಲಾದರೂ ಸಿಎಂ ಗುಪ್ತಚರ ಇಲಾಖೆ ಬಲಪಡಿಸಲಿ ಎಂದು ತಿಳಿಸಿದರು.
ಪಾಕಿಸ್ತಾನದಲ್ಲಿ ಏಷ್ಯಾದಲ್ಲೇ ಅತಿ ಹೆಚ್ಚು ಜೀವನ ವೆಚ್ಚ, ಶೇ.25ರಷ್ಟು ಹಣದುಬ್ಬರ ದರ: ಎಡಿಬಿ ವರದಿ
ಆರೋಪಿಗಳು ದಾಖಲೆ ಸೃಷ್ಟಿಸಿಕೊಂಡು ವಿದೇಶಕ್ಕೆ ಹೋಗಲು ಸಂಚು ರೂಪಿಸಿದ್ದರು. ಆದರೆ NIA ಶ್ರಮಪಟ್ಟು ಆರೋಪಿಗಳನ್ನು ಬಂಧಿಸಿದೆ.ಎನ್ಐಎ ಕಠಿಣ ಪರಿಶ್ರಮದಿಂದ ಉಗ್ರರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದರು.ಆರೋಪಿಗಳು ದಾಖಲೆ ಸೃಷ್ಟಿಸಿಕೊಂಡು ವಿದೇಶಕ್ಕೆ ಹೋಗಲು ಸಂಚು ರೂಪಿಸಿದ್ದರು. ಆದರೆ ಎನ್ಐಎ ಶ್ರಮಪಟ್ಟು ಆರೋಪಿಗಳನ್ನು ಬಂಧಿಸಿದೆ.
ಗೃಹ ಸಚಿವರು ಸಿಲಿಂಡರ್ ಸ್ಪೋಟಗೊಂಡಿದ್ದೆ ಎಂದು ಹೇಳಿದ್ದರು ಎಂದರು.ವೈಯಕ್ತಿಕ ಕಾರಣಕ್ಕೆ ಸ್ಪೋಟ ವಾಗಿರಬಹುದು ಎಂದು ಗೃಹ ಸಚಿವರು ಹೇಳಿದ್ದರು. ಉಪಮುಖ್ಯಮಂತ್ರಿ ಉಗ್ರರನ್ನು ಬ್ರದರ್ ಎಂದು ಕರೆದಿದ್ದರು. ಪಾಕಿಸ್ತಾನ ಪರ ಘೋಷಣೆ ಕೂಗು ಅವರಿಗೆ ಬೆಂಬಲ ನೀಡುತ್ತಿದ್ದರು. ಆದರೆ ಭಯೋತ್ಪಾದಕತೆಯನ್ನು ಮೋದಿ ಸರ್ಕಾರ ಸಹಿಸುವುದಿಲ್ಲ ಎಂದು ಜೋಶಿ ತಿಳಿಸಿದರು.