ಬೆಂಗಳೂರು : ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಸಚಿವರಾಗಿರುವವರ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ 9 ಕ್ಷೇತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಒಂಬತ್ತು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ ರೂ.25 ಕೋಟಿಗಳ ಭರ್ಜರಿ ಅನುದಾನ ನೀಡಲು ಅನುಮೋದನೆ ಸಿಕ್ಕಿದೆ.
ಪತಿಗೆ ‘ಸಂತಾನಹರಣ’ ಆಗಿಲ್ಲವೆಂದು ಪತ್ನಿಗೆ ಹೆರಿಗೆ ‘ರಜೆ ಭತ್ಯೆ’ ಕಟ್ : ‘KPTCL’ ಕ್ರಮಕ್ಕೆ ಹೈಕೋರ್ಟ್ ಕಿಡಿ
ಸಚಿವರಾಗಿರುವವರ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಶಿವಾಜಿನಗರ, ಗೋವಿಂದರಾಜ ನಗರ, ವಿಜಯನಗರ, ಪುಲಕೇಶಿನಗರ, ಶಾಂತಿನಗರ ಸೇರಿದಂತೆ ಒಟ್ಟು ಒಂಬತ್ತು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ ನೀಡಲು ಸಭೆಯಲ್ಲಿ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ.
ಜನ ಸಾಮಾನ್ಯರಿಗೆ ಬಿಗ್ ರಿಲೀಫ್ : ಜ್ವರ, ಮಧುಮೇಹ ಸೇರಿ ‘100 ಔಷಧಿ’ಗಳ ಬೆಲೆ ಇಳಿಕೆ
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ತಲಾ ರೂ.25 ಕೋಟಿಗಳಂತೆ 225 ಕೋಟಿ ಅನುದಾನ ನೀಡಲು ಸಭೆಯಲ್ಲಿ ಒಪ್ಪಿಗೆ ದೊರಕಿದೆ ಎಂದು ತಿಳಿದು ಬಂದಿದೆ.
ರಾಜ್ಯದ ‘ಪಡಿತರ ವಿತರಕ’ರಿಗೆ ಗುಡ್ ನ್ಯೂಸ್: ಪ್ರತಿ ಕೆಜಿ ಅಕ್ಕಿಗೆ ‘ಕಮೀಷನ್ ಮೊತ್ತ ರೂ.1.50’ ಹೆಚ್ಚಳ
ಅದೇ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಹಾಗೂ ಪ್ರಸನ್ನ ಕುಮಾರ್ ಬ್ಲಾಕ್ ಆವರಣದಲ್ಲಿ ಒಟ್ಟು 43 ಎಕರೆ ಜಮೀನಿನಲ್ಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಕಟ್ಟಡ, ಕ್ರೀಡಾ ಕಟ್ಟಡ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರೂ168.63 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುದೋದನೆ ಸಚಿವ ಸಂಪುಟ ಸಭೆಯಲ್ಲಿ ದೊರಕಿದೆ ಎಂದು ತಿಳಿದು ಬಂದಿದೆ.