ಗೋವಾ: ಗೋವಾದ ಮೊಪಾದಲ್ಲಿರುವ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಗೋವಾದ ಮುಖ್ಯಮಂತ್ರಿ ಆಗಿದ್ದ ಮನೋಹರ್ ಪರಿಕ್ಕರ್ (Manohar Parrikar) ಅವರ ಹೆಸರಿಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮನೋಹರ್ ಪರಿಕ್ಕರ್ ಅವರ ಗೌರವ ಸೂಚಕವಾಗಿ ಗೋವಾದ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ʻಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣʼ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
#Cabinet gives ex-post facto approval for naming of Greenfield International Airport Mopa, Goa as ‘Manohar International Airport – Mopa, Goa’, as a mark of tribute to Late Shri Manohar Parrikar, Ex-Defence Minister and Four-time Goa Chief Ministerhttps://t.co/UOSbw5IISs
— PIB India (@PIB_India) January 4, 2023
“ಗೋವಾ ರಾಜ್ಯದ ಜನತೆಯ ಆಕಾಂಕ್ಷೆಗಳನ್ನು ಈಡೇರಿಸಲು, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ʻ’ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣʼ ಇಂದು ಹೆಸರಿಡಲು ಸರ್ವಾನುಮತದ ನಿರ್ಧಾರವನ್ನು ಕೇಂದ್ರೆಕ್ಕೆ ತಿಳಿಸಿದ್ದರು.
ಗೋವಾದ ಮೊಪಾದಲ್ಲಿ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2022 ರ ಡಿಸೆಂಬರ್ನಲ್ಲಿ ಉದ್ಘಾಟಿಸಿದರು. ಆಧುನಿಕ ಗೋವಾವನ್ನು ನಿರ್ಮಿಸುವಲ್ಲಿ ಅವರ ಕೊಡುಗೆಯನ್ನು ಗುರುತಿಸಿ ದಿವಂಗತ ಮನೋಹರ್ ಪರಿಕ್ಕರ್ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
WATCH VIDEO: 30 ವಾರಗಳ ನಂತ್ರ ಉಕ್ರೇನಿಯನ್ ಸೈನಿಕ, ಆತನ ಗರ್ಭಿಣಿ ಪತ್ನಿಯ ಭೇಟಿ… ಭಾವನಾತ್ಮಕ ವಿಡಿಯೋ ವೈರಲ್
‘ಸ್ಯಾಂಟ್ರೋ ರವಿ’ ಜೊತೆ ಬಿಜೆಪಿ ಸಂಪರ್ಕ : HDK ಆರೋಪಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಟಾಂಗ್
WATCH VIDEO: 30 ವಾರಗಳ ನಂತ್ರ ಉಕ್ರೇನಿಯನ್ ಸೈನಿಕ, ಆತನ ಗರ್ಭಿಣಿ ಪತ್ನಿಯ ಭೇಟಿ… ಭಾವನಾತ್ಮಕ ವಿಡಿಯೋ ವೈರಲ್
‘ಸ್ಯಾಂಟ್ರೋ ರವಿ’ ಜೊತೆ ಬಿಜೆಪಿ ಸಂಪರ್ಕ : HDK ಆರೋಪಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಟಾಂಗ್