Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಭಾರತ ಫೆರಾರಿ, ಪಾಕ್ ಡಂಪರ್’ : ಅಸಿಮ್ ಮುನೀರ್ ವಾಸ್ತವ ಒಪ್ಪಿಕೊಂಡಿದ್ದಾರೆ ಎಂದ ರಾಜನಾಥ್ ಸಿಂಗ್

22/08/2025 6:15 PM

ಅಕ್ರಮ ಗಣಿಗಾರಿಕೆ ವರದಿಗೆ ಸಚಿವ ಸಂಪುಟ ಅನುಮೋದನೆ: ವರದಿಯಲ್ಲಿ ಏನಿದೆ ಗೊತ್ತಾ?

22/08/2025 5:57 PM

BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ 3ನೇ ಕೇಸಲ್ಲಿ ದೋಷಾರೋಪ ನಿಗದಿಪಡಿಸಿದ ಕೋರ್ಟ್

22/08/2025 5:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಕ್ರಮ ಗಣಿಗಾರಿಕೆ ವರದಿಗೆ ಸಚಿವ ಸಂಪುಟ ಅನುಮೋದನೆ: ವರದಿಯಲ್ಲಿ ಏನಿದೆ ಗೊತ್ತಾ?
KARNATAKA

ಅಕ್ರಮ ಗಣಿಗಾರಿಕೆ ವರದಿಗೆ ಸಚಿವ ಸಂಪುಟ ಅನುಮೋದನೆ: ವರದಿಯಲ್ಲಿ ಏನಿದೆ ಗೊತ್ತಾ?

By kannadanewsnow0922/08/2025 5:57 PM

ಬೆಂಗಳೂರು: ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರಚಿಸಲಾಗಿದ್ದ ಸಚಿವ ಸಂಪುಟದ ಉಪಸಮಿತಿಯ ವರದಿಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿರುವ ಬಗ್ಗೆ ಸರ್ಕಾರದ ಹೇಳಿಕೆ.

  1. ಕರ್ನಾಟಕ ರಾಜ್ಯದಲ್ಲಿ 2006 ರಿಂದ 2011 ರವರೆಗೆ ಭಾರಿ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದವು. ಈ ಅಕ್ರಮದಲ್ಲಿ ಅಧಿಕಾರಸ್ಥ ರಾಜಕಾರಣಿಗಳು, ವ್ಯಾಪಾರಸ್ಥರು, ಅಧಿಕಾರಿಗಳು ಹಾಗೂ ಇನ್ನಿತರರು ಶಾಮೀಲಾಗಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದರು ಎಂಬುದು ದೇಶದ ಮುಂದೆ ಜಗಜ್ಜಾಹೀರಾಗಿರುವ ಸಂಗತಿ. ಈ ಅಕ್ರಮಗಳನ್ನು ಲೋಕಾಯುಕ್ತ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿ ವರದಿ ನೀಡಿತ್ತು.
  2. 2013 ರಿಂದ 2018ರ ನಮ್ಮ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿತ್ತು. ಉಪ ಸಮಿತಿಯು ಗಣಿ ಅಕ್ರಮಗಳಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಿ ದಿನಾಂಕ: 16.10.2015 ರಂದು ನಡೆದ ಉಪ ಸಮಿತಿ ಸಭೆಯಲ್ಲಿ ಕೆಲವು ಶಿಫಾರಸ್ಸುಗಳನ್ನು ಮಾಡಿರುತ್ತದೆ.
  3. ಆ ಸಂದರ್ಭದಲ್ಲಿ, ಅಕ್ರಮ ಗಣಿಗಾರಿಕೆ ಕುರಿತು ನಮ್ಮ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಸರ್ಕಾರ ಬದಲಾದ ನಂತರ ಅಕ್ರಮ ಗಣಿಗಾರಿಕೆಯಿಂದ ಉಂಟಾದ ವಸೂಲಾತಿ ಇನ್ನಿತರೆ ಕ್ರಮಗಳಿಗೆ ಹಿನ್ನಡೆಯಾದವು.
  4. ಸಾರ್ವಜನಿಕ ಸಂಪತ್ತಿನ ಲೂಟಿಯ ಬಗ್ಗೆ ಆಗಬೇಕಾದಷ್ಟು ಕ್ರಮಗಳು ಆಗಲಿಲ್ಲ ಎಂಬುದನ್ನು ಗಮನಿಸಿದ ಪ್ರಸ್ತುತ ನಮ್ಮ ಸರ್ಕಾರವು ದಿನಾಂಕ: 05.07.2025 ರಲ್ಲಿ ಅಧಿಕೃತ ಜ್ಞಾಪನ ಸಂಖ್ಯೆ: ಸಸಂಶಾ 03 ಸಿಎಸ್ಸಿ 2025 ರಲ್ಲಿ ಮಾನ್ಯ ಶ್ರೀ ಹೆಚ್.ಕೆ. ಪಾಟೀಲ್, ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿತು.
  5. ಸದರಿ ಉಪ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿ, ದಾಖಲೆಯ ಅವಧಿಯಲ್ಲಿ ಸಭೆಗಳನ್ನು ಮಾಡಿ ದಿನಾಂಕ: 13.08.2025 ರಂದು ವರದಿ ನೀಡಿತು. ಸದರಿ ವರದಿಯನ್ನು ದಿನಾಂಕ: 19.08.2025 ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಗಿದೆ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ.

ಅಕ್ರಮ ಗಣಿಗಾರಿಕೆಯಿಂದ ತೆಗೆಯಲಾದ ಕಬ್ಬಿಣದ ಅದಿರಿನ ಪ್ರಮಾಣ ಅಂದಾಜಿಸಿದ ವಿವರಗಳು

  • ʼಬಿʼ ವರ್ಗದ 60 ಕಬ್ಬಿಣದ ಅದಿರಿನ ಗಣಿ ಗುತ್ತಿಗೆಗಳಿಂದ 9.37 ಕೋಟಿ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಹೊರ ತೆಗೆದಿರಬಹುದೆಂದು ಮಾನ್ಯ ಲೋಕಾಯುಕ್ತರ ವರದಿಯಲ್ಲಿ ಅಂದಾಜಿಸಲಾಗಿದೆ.
  • ʼಸಿʼ ವರ್ಗದ 51 ಕಬ್ಬಿಣದ ಅದಿರಿನ ಗಣಿ ಗುತ್ತಿಗೆಗಳಿಂದ ಅಕ್ರಮವಾಗಿ 9.70 ಕೋಟಿ ಟನ್ ಕಬ್ಬಿಣದ ಅದಿರು ಹೊರತೆಗೆದಿರುವುದಾಗಿ ಅಂದಾಜಿಸಲಾಗಿದೆ.
  • ಒಟ್ಟಾರೆ, ʼಬಿʼ ಮತ್ತು ʼಸಿʼ ವರ್ಗದ 111 ಕಬ್ಬಿಣದ ಅದಿರಿನ ಗಣಿ ಗುತ್ತಿಗೆಗಳಿಂದ ಅಂದಾಜು 19.07 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ತೆಗೆದು ಸಾಗಾಣಿಕೆಯಾಗಿರುವ ಸಾಧ್ಯತೆಯನ್ನು ಉಪಸಮಿತಿಯು ಗಮನಿಸಿದೆ.

ಸಚಿವ ಸಂಪುಟ ಉಪ ಸಮಿತಿಯ ವರದಿಯಲ್ಲಿನ ಶಿಫಾರಸ್ಸಿನಂತೆ ಸರ್ಕಾರವು ಕೈಗೊಂಡ ತೀರ್ಮಾನಗಳು

  1. ಉಪ ಸಮಿತಿಯ ಶಿಫಾರಸ್ಸಿನಂತೆ, ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ವಸೂಲಿ ಮಾಡಲು, ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರನ್ನು (Recovery Commissioner) ನೇಮಿಸಲು ರೂಪಿಸಲಾದ ಹೊಸ ಕರಡು ಮಸೂದೆಯನ್ನು ಸಚಿವ ಸಂಪುಟವು ಅಂಗೀಕರಿಸಿದೆ.
  2. ಮಾನ್ಯ ಲೋಕಾಯುಕ್ತರ ವರದಿಯ ಪ್ರಕಾರ, ಕ್ರಮವಾಗಿ ರಫ್ತಾಗಿರುವ 2.98 ಕೋಟಿ ಮೆಟ್ರಿಕ್ ಟನ್ ಅದಿರಿನ ಮೌಲ್ಯವು ರೂ. 12,228 ಕೋಟಿ ಎಂದು ಅಂದಾಜಿಸಲಾಗಿದೆ. ಅದರಂತೆ, ಸರಾಸರಿ ಬೆಲೆ ಪ್ರತಿ ಟನ್‌ಗೆ ರೂ.4,103 ಆಗಿರುತ್ತದೆ. ಅಕ್ರಮವಾಗಿ ರಫ್ತಾಗಿರುವ ಉಳಿದ 16.09 ಕೋಟಿ ಮೆಟ್ರಿಕ್ ಟನ್ ಅದಿರಿಗೆ ಲೋಕಾಯುಕ್ತ ವರದಿಯಲ್ಲಿ ಅಂದಾಜಿಸಿದAತೆ, ಒಟ್ಟು ರೂ.66,017 ಕೋಟಿ ರೂ. ಸರ್ಕಾರಕ್ಕೆ ನಷ್ಟ ಆಗಲಿದೆ. ಒಟ್ಟಾರೆಯಾಗಿ, 19.07 ಮೆಟ್ರಿಕ್ ಟನ್ ಅಕ್ರಮವಾಗಿ ರಫ್ತಾಗಿರುವ ಅದಿರಿನಿಂದ ಸರ್ಕಾರಕ್ಕೆ ರೂ.78,245 ಕೋಟಿ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
  3. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು SIಖಿ ತಂಡ ಅಥವಾ ಇನ್ನಿತರೆ ತನಿಖಾ ಸಂಸ್ಥೆಗಳಿಂದ ದಾಖಲಿಸುವ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳನ್ನು ((Fast Track Court) ಸ್ಥಾಪಿಸಲು ತೀರ್ಮಾನಿಸಲಾಗಿದೆ.
  4. ವಿಶೇಷ ತನಿಖಾ ತಂಡವು ಮಾನ್ಯ ನ್ಯಾಯಾಲಯಕ್ಕೆ 29 ಪ್ರಕರಣಗಳಲ್ಲಿ ʼಬಿʼ ರಿಪೋರ್ಟ್ ಸಲ್ಲಿಸಿರುವುದನ್ನು ಸಚಿವ ಸಂಪುಟದ ಉಪ ಸಮಿತಿಯು ಪರಿಶೀಲಿಸಿದೆ. ಹಲವು ಪ್ರಕರಣಗಳಲ್ಲಿ ʼಬಿʼ ರಿಪೋರ್ಟ್ನಲ್ಲಿ ದಾಖಲಿಸಿದ ಕಾರಣಗಳು ಮೇಲ್ನೋಟಕ್ಕೆ ಸಮಂಜಸವಾಗಿರುವದಿಲ್ಲವೆಂದು ಗಮನಿಸಿ, ಈ 29 ಪ್ರಕರಣಗಳಲ್ಲಿನ ʼಬಿʼ ರಿಪೋರ್ಟ್ ಅನ್ನು ಮರುಪರಿಶೀಲಿಸಲು ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸನ್ನು ಒಪ್ಪಿದೆ.
  5. ವಿಶೇಷ ತನಿಖಾ ತಂಡವು ಮಾನ್ಯ ನ್ಯಾಯಾಲಯಕ್ಕೆ 8 ಪ್ರಕರಣಗಳಲ್ಲಿ ʼಬಿʼ ರಿಪೋರ್ಟನ್ನು ಸಲ್ಲಿಸಿದೆ. ಇನ್ನೂ ನ್ಯಾಯಾಲಯದ ಅನುಮತಿ ದೊರಕದಿರುವ ಈ 8 ಪ್ರಕರಣಗಳ ʼಬಿʼ ರಿಪೋರ್ಟನ್ನು ನ್ಯಾಯಾಲಯದಿಂದ ಹಿಂಪಡೆಯಲು ತೀರ್ಮಾನಿಸಲಾಗಿದೆ.
  6. ಅರಣ್ಯ ಇಲಾಖೆಗೆ ಉಂಟಾದ ನಷ್ಟವನ್ನು ಅಂದಾಜಿಸಲು, ಅರಣ್ಯ ಇಲಾಖೆಯಲ್ಲಿ ಪ್ರಕರಣವಾರು ತನಿಖಾ ತಂಡವನ್ನು ರಚಿಸಲಾಗುವುದು.
  7. ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸಿನಂತೆ, ಸಿ.ಬಿ.ಐ. ನಿಂದ 10 ವರ್ಷಗಳ ನಂತರವೂ ತನಿಖೆ ನಡೆಸದೆ ಇರುವಂತಹ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕ್ರಮ ತೆಗೆದುಕೊಳ್ಳುವಂತೆ ಅಥವಾ ವಿಶೇಷ ತನಿಖಾ ತಂಡದ (SIT) ಮೂಲಕ ತನಿಖೆಗೆ ಒಳಪಡಿಸಲು ಸಿಬಿಐಗೆ ವಹಿಸಲಾದ ಪ್ರಕರಣಗಳನ್ನು ವಾಪಸ್ಸು ಕಳುಹಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ತೀರ್ಮಾನಿಸಲಾಗಿದೆ.
  8. ಕಬ್ಬಿಣದ ಅದಿರಿನ ಅನಧಿಕೃತ ಗಣಿಗಾರಿಕೆಗೆ, ಸಾಗಾಣಿಕೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎಫ್.ಐ.ಆರ್.ಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿ, ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮವಹಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
  9. CEC ಯು ʼಬಿʼ ವರ್ಗದ ಗಣಿ ಗುತ್ತಿಗೆಗಳಿಂದ ಹೊರತೆಗೆದ ಕಬ್ಬಿಣದ ಅದಿರಿನ ಪ್ರಮಾಣವನ್ನು ಅಂದಾಜಿಸುವ ಮಾನದಂಡಗಳ ಅನುಮೋದನೆಗಾಗಿ 2019 ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ವಿಷಯವು ಇತ್ಯರ್ಥಕ್ಕೆ ಬಾಕಿಯಿದ್ದು, ಮಾನ್ಯ ಸರ್ವೋಚ್ಛ ನ್ಯಾಯಾಲಯದಿಂದ ಸದರಿ ಮಾನದಂಡಗಳಿಗೆ ಶೀಘ್ರವಾಗಿ ಅನುಮೋದನೆಯನ್ನು ಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ.
  10. ಮಾನ್ಯ ನ್ಯಾಯಾಲಯಗಳಲ್ಲಿ (ಬೆಂಗಳೂರು ಹಾಗೂ ನವದೆಹಲಿ) ದಾಖಲಾಗುವ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಗಣಿಗಾರಿಕೆ ವಿಷಯದಲ್ಲಿ ಪರಿಣಿತಿ ಹೊಂದಿರುವ ಕಾನೂನು ಅಧಿಕಾರಿಗಳ ತಂಡವನ್ನು ರೂಪಿಸಲು ತೀರ್ಮಾನಿಸಲಾಗಿದೆ.
  11. ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಸರ್ಕಾರಿ ಅಧಿಕಾರಿಗಳು / ಸಿಬ್ಬಂದಿ ವರ್ಗ ಮತ್ತು ಮಧ್ಯವರ್ತಿಗಳು / ಖಾಸಗಿ ವ್ಯಕ್ತಿಗಳ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನಂತೆ ಸೂಕ್ತ ಕ್ರಮ ಜರುಗಿಸಲಾಗುವುದು.

ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು, ನ್ಯಾಯಾಲಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಹಾಗೂ ರಾಜ್ಯ ಸರ್ಕಾರಕ್ಕೆ ಸಂಭವಿಸಿರುವ ನಷ್ಟವನ್ನು ವಸೂಲಾತಿ ಮಾಡಲು ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ.

ನಮ್ಮ ಸರ್ಕಾರವು ಸಾರ್ವಜನಿಕ ಸಂಪತ್ತಿನ ಲೂಟಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಹ ಸದನಕ್ಕೆ ತಿಳಿಸಬಯಸುತ್ತೇನೆ.

ಅನುಬಂಧ-1

KSRSAC ಸಂಸ್ಥೆಯು 2006-07 ಮತ್ತು 2018-19ನೇ ಸಾಲಿನ ಉಪಗ್ರಹ ಚಿತ್ರಗಳ ಮಾಹಿತಿ ಆಧರಿಸಿ ಅಕ್ರಮ ಗಣಿಗಾರಿಕೆಯಿಂದ ಹೊರತೆಗೆದಿರುವ ಕಬ್ಬಿಣದ ಅದಿರಿನ ಅಂದಾಜಿಸಿದ ಪ್ರಮಾಣ

ಕ್ರ. ಸಂ. ಜಿಲ್ಲೆ ಗಣಿ ಗುತ್ತಿಗೆ ವರ್ಗ ಗುತ್ತಿಗೆಗಳ ಸಂಖ್ಯೆ ಹೊರತೆಗೆದ ಪ್ರಮಾಣ (ಮೆ.ಟನ್) ಅನುಮತಿಸಿದ್ದ ಪ್ರಮಾಣ (ಮೆ.ಟನ್) ಹೆಚ್ಚುವರಿಯಾಗಿ ಹೊರತೆಗೆದ ಪ್ರಮಾಣ (ಮೆ.ಟನ್)
1 ಚಿತ್ರದುರ್ಗ B 7 34878342 31174944 3703398
2 ತುಮಕೂರು B 12 16322309 7060037 9262272
3 ಬಳ್ಳಾರಿ B 22 98418088 42092829 56325259
4 ಬಳ್ಳಾರಿ (OAC) B 19 70927095 46515986 24411109
ಒಟ್ಟು 60 220545834 126843796 93702038
5 ಚಿತ್ರದುರ್ಗ C 8 2280845 1899729 381116
6 ತುಮಕೂರು C 12 11874041 2639436 9234605
7 ಬಳ್ಳಾರಿ C 18 66592064 24854479 41737585
8 ಬಳ್ಳಾರಿ (OAC) C 13 131975674 86276014 45699660
ಒಟ್ಟು 51 212722624 115669658 97052966
ಒಟ್ಟಾರೆ 111 433268458 242513454 190755004
  • ಇದು ತಾತ್ಕಾಲಿಕ ಅಂದಾಜಾಗಿದೆ.
  • ಕ್ರಮ ಸಂಖ್ಯೆ 4 ರಲ್ಲಿರುವ ಪ್ರಮಾಣವನ್ನು CEC ನೇತೃತ್ವದ ಅದಿರು ಮೌಲ್ಯಮಾಪನ ಸಮಿತಿಯು 1993 ಮತ್ತು 2019-20 ರ ಕಾರ್ಟೊ-ಸ್ಯಾಟ್ ಚಿತ್ರಗಳ ಉಪಗ್ರಹ ಚಿತ್ರಗಳನ್ನು ಆಧರಿಸಿ ಅಂದಾಜಿಸಿದೆ.
  • ಕ್ರಮ ಸಂಖ್ಯೆ 8 ರಲ್ಲಿರುವ ಪ್ರಮಾಣವನ್ನು DMG ನೇತೃತ್ವದ Ore Evaluation Committee ಯು 1993 ಮತ್ತು 2015 ರ ಕಾರ್ಟೊ-ಸ್ಯಾಟ್ ಚಿತ್ರಗಳ ಉಪಗ್ರಹ ಚಿತ್ರಗಳನ್ನು ಆಧರಿಸಿ ಅಂದಾಜಿಸಿದೆ.
  • ಕೆಲವು ಸಂದರ್ಭಗಳಲ್ಲಿ ನೀಡಲಾದ ಪರವಾನಗಿಗಳು ಹೊರತೆಗೆಯಲಾದ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ. ಅಂತಹ ಹೆಚ್ಚುವರಿ ಪ್ರಮಾಣವು, ಇತರ ಗುತ್ತಿಗೆಗಳ ಪರವಾನಗಿಗಳನ್ನು ಬಳಕೆ ಮಾಡಿರಬಹುದು. ಆದ್ದರಿಂದ ಈ ಹೆಚ್ಚುವರಿ ಪ್ರಮಾಣವನ್ನು ಶೂನ್ಯವೆಂದು ಪರಿಗಣಿಸಲಾಗುತ್ತದೆ.

BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ 3ನೇ ಕೇಸಲ್ಲಿ ದೋಷಾರೋಪ ನಿಗದಿಪಡಿಸಿದ ಕೋರ್ಟ್

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ 2.5 ಲಕ್ಷ ಹೊಸ ಉದ್ಯೋಗಗಳು ಲಭ್ಯ

BREAKING: ಡಿಸಿಇಟಿಯ ಅಂತಿಮ ಸುತ್ತಿನ ಫಲಿತಾಂಶ ಪ್ರಕಟಿಸಿದ ಕೆಇಎ

Share. Facebook Twitter LinkedIn WhatsApp Email

Related Posts

BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ 3ನೇ ಕೇಸಲ್ಲಿ ದೋಷಾರೋಪ ನಿಗದಿಪಡಿಸಿದ ಕೋರ್ಟ್

22/08/2025 5:55 PM1 Min Read

BREAKING: ಡಿಸಿಇಟಿಯ ಅಂತಿಮ ಸುತ್ತಿನ ಫಲಿತಾಂಶ ಪ್ರಕಟಿಸಿದ ಕೆಇಎ

22/08/2025 5:37 PM1 Min Read

ನಾಳೆ ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

22/08/2025 5:36 PM1 Min Read
Recent News

‘ಭಾರತ ಫೆರಾರಿ, ಪಾಕ್ ಡಂಪರ್’ : ಅಸಿಮ್ ಮುನೀರ್ ವಾಸ್ತವ ಒಪ್ಪಿಕೊಂಡಿದ್ದಾರೆ ಎಂದ ರಾಜನಾಥ್ ಸಿಂಗ್

22/08/2025 6:15 PM

ಅಕ್ರಮ ಗಣಿಗಾರಿಕೆ ವರದಿಗೆ ಸಚಿವ ಸಂಪುಟ ಅನುಮೋದನೆ: ವರದಿಯಲ್ಲಿ ಏನಿದೆ ಗೊತ್ತಾ?

22/08/2025 5:57 PM

BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ 3ನೇ ಕೇಸಲ್ಲಿ ದೋಷಾರೋಪ ನಿಗದಿಪಡಿಸಿದ ಕೋರ್ಟ್

22/08/2025 5:55 PM

‘Dream11’ ವ್ಯವಹಾರ ಸ್ಥಗಿತಕ್ಕೆ ನಿರ್ಧಾರ ; ಬಳಕೆದಾರರಲ್ಲಿ ಭೀತಿ, ವ್ಯಾಲೆಟ್’ನಲ್ಲಿರೋ ಹಣ ವಿತ್ ಡ್ರಾ

22/08/2025 5:44 PM
State News
KARNATAKA

ಅಕ್ರಮ ಗಣಿಗಾರಿಕೆ ವರದಿಗೆ ಸಚಿವ ಸಂಪುಟ ಅನುಮೋದನೆ: ವರದಿಯಲ್ಲಿ ಏನಿದೆ ಗೊತ್ತಾ?

By kannadanewsnow0922/08/2025 5:57 PM KARNATAKA 4 Mins Read

ಬೆಂಗಳೂರು: ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರಚಿಸಲಾಗಿದ್ದ ಸಚಿವ ಸಂಪುಟದ ಉಪಸಮಿತಿಯ ವರದಿಯನ್ನು ರಾಜ್ಯ…

BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ 3ನೇ ಕೇಸಲ್ಲಿ ದೋಷಾರೋಪ ನಿಗದಿಪಡಿಸಿದ ಕೋರ್ಟ್

22/08/2025 5:55 PM

BREAKING: ಡಿಸಿಇಟಿಯ ಅಂತಿಮ ಸುತ್ತಿನ ಫಲಿತಾಂಶ ಪ್ರಕಟಿಸಿದ ಕೆಇಎ

22/08/2025 5:37 PM

ನಾಳೆ ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

22/08/2025 5:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.