ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ವಿರುದ್ಧದ ಸಿಎ ಸೈಟ್ ಹಗರಣದ ಬಗ್ಗೆ ಬಿಜೆಪಿ ನಾಯಕರಿಗೆ ದಮ್ಮು ತಾಕತ್ತಿದ್ದರೆ ನಿಯಮ ಉಲ್ಲಂಘಿಸಿದ್ದಕ್ಕೆ, ಅಧಿಕಾರ ಬಳಕೆ ಮಾಡಿಕೊಂಡಿದ್ದಕ್ಕೆ, ಪ್ರಭಾವ ಬೀರಿದ್ದಕ್ಕೆ ದಾಖಲೆ ಮುಂದಿಟ್ಟು ಮಾತಾಡಲಿ ಎಂಬುದಾಗಿ ಕಾಂಗ್ರೆಸ್ ಸವಾಲು ಹಾಕಿದೆ.
ಈ ಬಗ್ಗೆ ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ನಿಯಮವನ್ನು ಉಲ್ಲಂಘಿಸಿ 39 ಎಕರೆ ಭೂಮಿಯನ್ನು ನುಂಗಿತ್ತು ಯಡಿಯೂರಪ್ಪನವರ ಕುಟುಂಬದ ಪ್ರೇರಣಾ ಟ್ರಸ್ಟ್. ಯಡಿಯೂರಪ್ಪನವರ ಪ್ರಭಾವ ಬಳಸಿ, ಮುಖ್ಯಮಂತ್ರಿ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಈ ಅಕ್ರಮ ನಡೆಸಿದ್ದಲ್ಲವೇ ಬಿಜೆಪಿ? ಎಂದು ಪ್ರಶ್ನಿಸಿದೆ.
ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಸಿದ್ದಾರ್ಥ ವಿಹಾರ ಟ್ರಸ್ಟ್ ಇಂತಹ ಅಕ್ರಮ ಮಾರ್ಗದಲ್ಲಿ ನಿವೇಶನ ಪಡೆದಿಲ್ಲ ಎಂಬುದನ್ನು ಬಿಜೆಪಿ ಗಮನಿಸಲಿ. ನಿಯಮಾನುಸಾರ, ಸರ್ಕಾರ ನಿಗದಿ ಪಡಿಸಿದ ಹಣ ಪಾವತಿಸಿಯೇ ನಿವೇಶನ ಪಡೆಯಲಾಗಿದೆ ಎಂದು ಹೇಳಿದೆ.
ಬಿಜೆಪಿ ನಾಯಕರಿಗೆ ದಮ್ಮು ತಾಕತ್ತಿದ್ದರೆ ನಿಯಮ ಉಲ್ಲಂಘಿಸಿದ್ದಕ್ಕೆ, ಅಧಿಕಾರ ಬಳಕೆ ಮಾಡಿಕೊಂಡಿದ್ದಕ್ಕೆ, ಪ್ರಭಾವ ಬೀರಿದ್ದಕ್ಕೆ ದಾಖಲೆ ಮುಂದಿಟ್ಟು ಮಾತಾಡಲಿ ಎಂದು ಸವಾಲ್ ಹಾಕಿದೆ.
ಕೊನೆಯದಾಗಿ ಬಿಜೆಪಿಗೊಂದು ಪ್ರಶ್ನೆ, ಬೊಮ್ಮಾಯಿಯವರು ತಡೆಯಾಜ್ಞೆ ತಂದಿದ್ದು ಯಾವ ಕಾರಣಕ್ಕೆ?! ಎಂದು ಪ್ರಶ್ನಿಸಿದೆ.
ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ನಿಯಮವನ್ನು ಉಲ್ಲಂಘಿಸಿ 39 ಎಕರೆ ಭೂಮಿಯನ್ನು ನುಂಗಿತ್ತು ಯಡಿಯೂರಪ್ಪನವರ ಕುಟುಂಬದ ಪ್ರೇರಣಾ ಟ್ರಸ್ಟ್.
ಯಡಿಯೂರಪ್ಪನವರ ಪ್ರಭಾವ ಬಳಸಿ, ಮುಖ್ಯಮಂತ್ರಿ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಈ ಅಕ್ರಮ ನಡೆಸಿದ್ದಲ್ಲವೇ @BJP4Karnataka ?ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಸಿದ್ದಾರ್ಥ ವಿಹಾರ ಟ್ರಸ್ಟ್ ಇಂತಹ…
— Karnataka Congress (@INCKarnataka) August 30, 2024
‘BESCOM ಗ್ರಾಹಕ’ರಿಗೆ ಬಿಗ್ ಶಾಕ್: 30 ದಿನಗಳ ಒಳಗೆ ಬಿಲ್ ಪಾವತಿಸದಿದ್ದರೇ ‘ವಿದ್ಯುತ್ ಸಂಪರ್ಕ ಕಡಿತ’
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays