ಬೆಂಗಳೂರು: ಸೆ. 2 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕರಾವಳಿಲ್ಲಿ ಈಗಾಗಲೇ ವಿಶೇಷ ವೇದಿಕೆ ಸಜ್ಜಾಗಿದೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಸಣ್ಣಪುಟ್ಟ ಸಂಗತಿಗಳಿಗೂ ಬಿಜೆಪಿ ಹೆಚ್ಚಿನ ಗಮನ ಹರಿಸಲಾಗಿದೆ.
BIGG NEWS: ಮಂಗಳೂರಿಗೆ ಸೆ.2 ರಂದು ಪ್ರಧಾನಿ ಮೋದಿ ಆಗಮನ; ನಗರದಲ್ಲಿ ಭಾರಿ ಕಟ್ಟೆಚ್ಚರ
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮದ ಉಸ್ತುವಾರಿ ವಹಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರಧಾನಿ ಮೋದಿ ಅವರಿಗೆ ಈ ಕಾರ್ಯಕ್ರಮದ ನೆನಪಿಗಾಗಿ ತುಳಿನಾಡು ನಿರ್ಮಾತೃ ಪರಶುರಾಮನ ಭವ್ಯ ಪುತ್ಥಳಿ ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ.
ಇನ್ನು ಈ ಸಮಾವೇಶಕ್ಕೆ ಬೇರೆ ಕಡೆಯಿಂದ ಬರುವ ಜನರಿಗೆ ೨೦೦೦ ಬಸ್ ಗಳನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.