ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ರಾಜ್ಯಕ್ಕೆ ವ್ಯಾಪಿಸಿದೆ.ಇದೇ ತಿಂಗಳು ಅಂದರೆ ಸೆ. 30 ರಂದು ರಾಜ್ಯಕ್ಕೆ ಪ್ರವೇಶ ಮಾಡಲಿದೆ . ಇದಕ್ಕಾಗಿ ಕಾಂಗ್ರೆಸ್ ನಾಯಕರು ಅವರನ್ನ ಅದ್ಧೂರಿ ಸ್ವಾಗತ ಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ.
ಸೆ.7 ರಂದು ಕಮ್ಯಾಕುಮಾರಿಯಿಂದ ಆರಂಭವಾಗಿರುವ ಪಾದಯಾತ್ರೆ ರಾಜ್ಯದಲ್ಲಿ ‘ಭಾರತ ಐಕ್ಯತಾ ಯಾತ್ರೆ’ ಹೆಸರಿನಲ್ಲಿ ಸಾಗಲಿದೆ. ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಹಿರಿಯರು ಹಾಗೂ ಕಿರಿಯರಿಗೆ ಇದರ ಜವಾಬ್ದಾರಿಯನ್ನು ಹಂಚಲಾಗಿದ್ದು, ಪ್ರತಿಯೊಬ್ಬರೂ ತಮಗೆ ಹಂಚಿಕೆಯಾದ ಜವಾಬ್ದಾರಿಯನ್ನು ನಿಭಾಯಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ರಾಜ್ಯದ ಯಾವ ದಿನ, ಎಲ್ಲೆಲ್ಲಿ ಸಂಚಾರ?
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಪ್ರವೇಶ ಪಡೆಯುವ ಯಾತ್ರೆ ರಾಯಚೂರು ಮೂಲಕ ರಾಜ್ಯದಿಂದ ಹೊರಬೀಳಲಿದೆ. ಈ ಯಾತ್ರೆ ರಾಜ್ಯದಲ್ಲಿ ಸಾಗುವ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಹಲವು ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ.
ಭಾರತ್ ಜೋಡೋ ಯಾತ್ರೆ ಸೆ.30 ರಂದು ರಾಜ್ಯಕ್ಕೆ ಪ್ರವೇಶಿಸಲಿದೆ. ಇಲ್ಲಿ ಭಾರತ ಐಕ್ಯತಾ ಯಾತ್ರೆಯಾಗಿ 21 ದಿನ ನಡೆಯಲಿದೆ.
ಸೆ.30 ಗುಂಡ್ಲುಪೇಟೆಯಿಂದ ಬೇಗೂರು ಯಾತ್ರೆ ನಡೆಯಲಿದೆ. ಎರಡು ದಿನ ಗುಂಡ್ಲುಪೇಟೆಯಲ್ಲಿ ಯಾತ್ರೆ ಸಂಚಾರ ಮಾಡಲಿದೆ.
ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು, ಭಾಗಿಯಾಗಲಿದ್ದಾರೆ.
ಈ ಸಂದರ್ಭ ಒಟ್ಟು 7 ವಿಧಾನಸಭಾ ಕ್ಷೇತ್ರದ ಕೈ ನಾಯಕರು ಭಾಗಿಯಾಗುತ್ತಾರೆ.
ಅ.1 ರಂದು ಬೇಗೂರಿನಿಂದ ತಾಂಡವಪುರಕ್ಕೆ ಯಾತ್ರೆ ಸಾಗಲಿದೆ.ಹೆಗ್ಗಡದೇವನಕೋಟೆ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ, ವಿರಾಜಪೇಟೆ, ನಂಜನಗೂಡು, ಹುಣಸೂರು, ರಾಮನಗರ,ಕನಕಪುರ, ಚನ್ನಪಟ್ಟಣ, ಕೈ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗುತ್ತಾರೆ.
ಒಟ್ಟು 10 ಕ್ಷೇತ್ರಗಳ,ಶಾಸಕರು, ನಾಯಕರು ಕಾರ್ಯಕರ್ತರು ಪಾಲ್ಗೊಳ್ಳುವರು.