ಬೆಂಗಳೂರು: ವಿಶ್ವದ ಅತ್ಯಂತ ಮೌಲ್ಯಯುತವಾದ ಎಜ್ಯುಟೆಕ್ ಸ್ಟಾರ್ಟ್ಅಪ್ ಕಂಪನಿ ಬೈಜೂಸ್(Byju’s) ಶೇ.5ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧಾರಿಸಿದೆ ಕಂಪನಿಯ ಸಹ ಸಂಸ್ಥಾಪಕಿ ದಿವ್ಯಾ ಗೋಕುಲ್ನಾಥ್(Divya Gokulnath ಮಾಹಿತಿ ನೀಡಿದ್ದಾರೆ
ಮುಂದಿನ 6 ತಿಂಗಳಲ್ಲಿ 2500 ನೌಕರರನ್ನು ವಜಾ ಮಾಡಲಿದೆ ಎಂದು ಕಂಪನಿಯ ಸಹ ಸಂಸ್ಥಾಪಕಿ ದಿವ್ಯಾ ಗೋಕುಲ್ನಾಥ್(Divya Gokulnath) ಹೇಳಿದ್ದಾರೆ. ಕಾರ್ಯನಿರ್ವಹಣಾ ವೆಚ್ಚವನ್ನು ತಗ್ಗಿಸಲು ಬೈಜೂಸ್ ಶೇ.5ರಷ್ಟು ನೌಕರರು ಎಂದರೆ 2500 ಜನರನ್ನು ವಜಾ ಮಾಡಲು ನಿರ್ಧರಿಸಿದೆ. ಕಂಪನಿಯನ್ನು ಲಾಭದಾಯಕ ಮಾಡಿಕೊಳ್ಳಲು 10 ಸಾವಿರ ಶಿಕ್ಷಕಕರನ್ನು(Teachers) ನೇಮಿಸಲಾಗುವುದು. ಈ ಪ್ರಕ್ರಿಯೆ ಮುಂದಿನ 6 ತಿಂಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೂನ್ನಲ್ಲಿಯೂ ನೂರಾರು ಉದ್ಯೋಗಿಗಳನ್ನು ಬೈಜೂಸ್ ವಜಾಗೊಳಿಸಿತ್ತು.