ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಿಗರಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಚಿಗರಿ ಪಥದಲ್ಲಿ ಈ ಒಂದು ಅಪಘಾತ ಸಭವಿಸಿದೆ. ನೆಕ್ಸಾನ್ ಕಾರು ಚಾಲಕ ಗಿರೀಶ್ ಬಣವಿ (62) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಮೃತ ಗಿರೀಶ್ ಧಾರವಾಡ ನಗರದ ಸರಸ್ವತಿಪುರ ನಿವಾಸಿ ಎಂದು ತಿಳಿದು ಬಂದಿದ್ದು, ಹುಬ್ಬಳ್ಳಿ ಕಡೆಯಿಂದ ಚಿಗರಿ ಬಸ್ ಧಾರವಾಡ ಕಡೆಗೆ ಹೊರಟಿತ್ತು. ಧಾರವಾಡ ಕಡೆಯಿಂದ ಗಿರೀಶ್ ಅವರು ತಮ್ಮ ನೆಕ್ಸನ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಗಿರೀಶ್ ಸಾವನಪ್ಪಿದ್ದಾರೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








