ತುಮಕೂರು: ಜಿಲ್ಲೆಯಲ್ಲಿ ಕುಚ್ಚಂಗಿ ಕೆರೆಯ ಬಳಿಯಲ್ಲಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಶವಗಳು ಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ತುಮಕೂರು ತಾಲೂಕಿನ ಕುಚ್ಚಂಗಿಯ ಕೆರೆಯ ಬಳಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಶವ ಪತ್ತೆಯಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ.
ನಿನ್ನೆ ತಡರಾತ್ರಿ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರ ಬೇಕೋ ಅಥವಾ ಬೇರೆಯವರು ಹತ್ಯೆ ಮಾಡಿರಬೇಕೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಕೋರಾ ಠಾಣೆಯ ಪೊಲೀಸರು ಬೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಧ್ಯಪ್ರದೇಶ : ವಿವಾದಿತ ‘ಭೋಜಶಾಲ-ಕಮಲ್ ಮೌಲಾ’ ಮಸೀದಿ ಸಂಕೀರ್ಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ
ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ಸ್ಪೋಟದ ಆರೋಪಿಯ ಬಗ್ಗೆ ‘NIA’ಗೆ ಮಹತ್ವದ ಸುಳಿವು ಪತ್ತೆ