ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಂಪನಿಯೊಂದು ಮದ್ಯಪ್ರಿಯರಿಗೆ ಬಂಪರ್ ಆಫರ್ ನೀಡಿದ್ದು, ಸುಲಭ ಕೆಲಸ ನೀಡಿ ಸಿಕ್ಕಾಪಟ್ಟೆ ಸಂಬಳ ನೀಡುತ್ತಿದೆ.
ಹೌದು, ಈ ಕೆಲಸಕ್ಕಾಗಿ ನೀವು ಗಂಟೆಗಟ್ಟಲೆ ಲ್ಯಾಪ್ಟಾಪ್ನತ್ತ ಮುಂದೆ ಕೂರಬೇಕಿಲ್ಲ. ಕಷ್ಟ ಪಟ್ಟು ಕೆಲಸ ಮಾಡುವ ಅಗತ್ಯವೂ ಇಲ್ಲ. ನೀವಿಲ್ಲಿ ಜಸ್ಟ್ ಬಿಯರ್ ಟೇಸ್ಟ್ ಮಾಡಿದ್ರೆ ಸಾಕು. ಇಷ್ಟಕ್ಕೂ ಬಿಯರ್ ಕುಡಿದ್ರೂ ಸಂಬಳ ಕೊಡುವ ಕಂಪನಿಯಾದ್ರು ಯಾವ್ದು? ಮುಂದೆ ಓದಿ.
ಅಂದ್ಹಾಗೆ, ಸುಪ್ರಸಿದ್ಧ ಅಲ್ಡಿ ಕಂಪನಿ ಈ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಿದೆ. ಹುದ್ದೆಯ ಹೆಸರು ಬಿಯರ್ ಟೇಸ್ಟರ್ ಅಂತಾ. ಇನ್ನು ಈ ಹುದ್ದೆಗೆ ಬೇಕಾದ ಅರ್ಹತೆಯೇನೆಂದ್ರೆ, ಈ ಪರೀಕ್ಷನ ನಾಲಿಗೆ ಟೇಸ್ಟ್ ಮಾಡುವುದರಲ್ಲಿ ನಿಸ್ಸೀಮನಾಗಿರಬೇಕು. ಅಷ್ಟು ಮಾತ್ರವಲ್ಲ, ಬಿಯರ್ ರುಚಿಯನ್ನ ವಿವರವಾಗಿ ವಿವರಿಸಲು ಬಲ್ಲವನಾಗಿರಬೇಕು. ಹಾಗಂತ ಒತ್ತಡಕ್ಕೆ ಮಣಿದೋ ಅಥ್ವಾ ಇನ್ನು ಯಾವುದೋ ಕಾರಣದಿಂದ್ಲೂ ರುಚಿ ಚೆನ್ನಾಗಿದೆ ಅನ್ನೋದಲ್ಲ. ರುಚಿಯನ್ನ ಬಹಳ ಪ್ರಾಮಾಣಿಕವಾಗಿ ವಿವರಿಸಬೇಕು. ಯಾಕಂದ್ರೆ ಕಂಪನಿಯ ಪ್ರಕಾರ, ವೈನ್ ರುಚಿಯನ್ನ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಮಾರ್ಪಡಿಸಲಾಗುತ್ತದೆ ಮತ್ತು ರೂಪಿಸಲಾಗುತ್ತದೆ.
ಇನ್ನು ನಿಮಗೂ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತಿಯಿದ್ರೆ, ಆಲ್ಡಿ ಅಧಿಕೃತ ಇಮೇಲ್ ಐಡಿಗೆ ಮೇಲ್ ಕಳುಹಿಸಿ.
ಇದ್ರಲ್ಲಿ ನಿಮ್ಮ ನೆಚ್ಚಿನ ಬಿಯರ್ನ ಹೆಸರು ಮತ್ತು ಅದರ ರುಚಿಯನ್ನ ನೀವು ನಮೂದಿಸಬೇಕು. ನಂತ್ರ ನಿಮ್ಮ ಪೂರ್ಣ ಹೆಸರು, ನಿಮ್ಮ ವಯಸ್ಸು ಮತ್ತು ನಿಮ್ಮ ಪ್ರಾಮುಖ್ಯತೆಯನ್ನ 150 ಪದಗಳಲ್ಲಿ ಹೇಳಬೇಕು. ನಿಮ್ಮ ಮೇಲ್ ಅವ್ರಿಗೆ ಒಪ್ಪಿಯಾದ್ರೆ, ಪ್ರತಿ ಟೇಸ್ಟರ್ಗೆ ಹತ್ತು ಫ್ಲೇವರ್ಗಳ ಬಿಯರ್ ಕಳುಹಿಸಲಾಗುವುದು. ಈ ಕೆಲಸಕ್ಕೆ ನೀವು ಪರಿಪೂರ್ಣರೆಂದು ಭಾವಿಸಿದ್ರೆ ನಿಮ್ಗೆ ಖಂಡಿತ ಕೆಲಸ ಸಿಗುತ್ತೆ.