ಬೆಂಗಳೂರು: ನಗರದಲ್ಲಿ ಇಂದು ಸಹ ಬುಲ್ಡೋಜರ್ ಘರ್ಜನೆ ಮುಂದುವರೆಯಲಿದೆ. ಇದೀಗ ಜಿಲ್ಲೆ ವಿಜಯನಗರಕ್ಕೂ ವ್ಯಾಪಿಸಿದೆ.
BREAKING NEWS: ಬಿಜೆಪಿ-ಜೆಡಿಎಸ್ ಮಧ್ಯೆ ಜೋರಾದ BMS ಹಗರಣ; ಸದನದಲ್ಲಿ ಗದ್ದಲ
ರಸ್ತೆ ಮೇಲೆ ಮನೆ ಕಟ್ಟಿದವರಿಗೆ ಇಲ್ಲಿನ ತಾಲೂಕು ಆಡಳಿತ ಬಿಗ್ ಶಾಕ್ ನೀಡಿದೆ. ಕಳೆದ ಒಂದು ತಿಂಗಳಿಂದ ಒತ್ತುವರಿ ತೆರವು ಕಾರ್ಯಕ್ಕೆ ನಾಂದಿ ಹಾಡಿರುವ ತಾಲೂಕು ಆಡಳಿತ ಈಗ ಮತ್ತೆ ಬುಲ್ಡೋಜರ್ ಸದ್ದು ಮಾಡಲು ಸಿದ್ಧವಾಗಿವೆ.
ವಿಜಯನಗರದ ಹೊಸಪೇಟೆ ಜಿಲ್ಲಾ ಕೇಂದ್ರ ಸ್ಥಾನವಾದ ಬಳಿಕ ನಗರದ ಸೌಂದರ್ಯ ಹಾಗೂ ನಗರದ ರಸ್ತೆ ಸುಗಮ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಲು ಸ್ಥಳೀಯ ಆಡಳಿತ ಮುಂದಾಗಿದೆ. ಈ ಕಾರಣ ತಮ್ಮ ಸ್ವಂತ ಜಾಗದ ಜೊತೆಗೆ ಸರ್ಕಾರಿ ಜಾಗದಲ್ಲಿ ಮೆಟ್ಟಿಲು, ಕಾಂಪೌಂಡ್ ಕಟ್ಟಿರುವ ಮನೆಗಳಿಗೂ ಶಾಕ್ ನೀಡಿದ್ದಾರೆ. ಅವುಗಳ ತೆರವಿಗೆ ನೋಟಿಸ್ ಜಾರಿ ಮಾಡಿರೋ ತಾಲೂಕು ಕಚೇರಿ 7 ದಿನಗಳ ಒಳಗೆ ಒತ್ತುವರಿ ಮಾಡಿರೋ ಜಾಗ ಬಿಟ್ಟುಕೊಡುವಂತೆ ಆದೇಶಿಸಿದೆ.
BREAKING NEWS: ಬಿಜೆಪಿ-ಜೆಡಿಎಸ್ ಮಧ್ಯೆ ಜೋರಾದ BMS ಹಗರಣ; ಸದನದಲ್ಲಿ ಗದ್ದಲ
ತಹಸೀಲ್ದಾರ್ ನೋಟೀಸ್ ಜಾರಿ ಮಾಡುತ್ತಿದ್ದಂತೆ ಕಂಗಾಲಾಗಿರೋ ನಿವಾಸಿಗಳು, ಏಕಾಏಕಿ ಬಂದು ತೆರವು ಮಾಡಿ ಅಂದ್ರೆ ಎಲ್ಲಿಗೆ ಹೋಗಬೇಕು ಅಂತ ಅಳಲು ತೋಡಿಕೊಂಡಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಒತ್ತವರಿ ತೆರವು ಮಾಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.