ಢಾಕಾ: ಬಾಂಗ್ಲಾದೇಶದಲ್ಲಿರುವ ಎರಡು ಅಪರೂಪದ ಎಮ್ಮೆಗಳು ಈಗ ಜಗತ್ತಿನಾದ್ಯಂತ ಭಾರಿ ಕುತೂಹಲ ಮೂಡಿಸಿದ್ದು, ಅವುಗಳ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದಕ್ಕೆ ಮುಖ್ಯ ಕಾರಣ, ಈ ಎಮ್ಮೆಗಳನ್ನು ನೋಡಿದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೆನಪಾಗುತ್ತಾರಂತೆ! ಹೌದು, ಈ ಕಾರಣಕ್ಕಾಗಿಯೇ ಮಾಲೀಕರು ಈ ಎಮ್ಮೆಗಳಿಗೆ ಆ ಇಬ್ಬರು ಜಾಗತಿಕ ನಾಯಕರ ಹೆಸರನ್ನೇ ಇಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಎಮ್ಮೆ
ಕೇಳಲು ಅಚ್ಚರಿ ಎನಿಸಿದರೂ ಇದು ನಿಜ. ‘ಟ್ರಂಪ್’ ಎಂದು ಹೆಸರಿಡಲಾದ ಈ ಎಮ್ಮೆಯ ಮೈಬಣ್ಣ ಹಾಗೂ ತಲೆಗೂದಲಿನ ಬಣ್ಣ ಸ್ವಲ್ಪ ಬಿಳಿ ಮತ್ತು ಹೊಂಬಣ್ಣದ ಮಿಶ್ರಣದಂತಿದೆ. ಅಷ್ಟೇ ಅಲ್ಲದೆ, ಇದರ ಹೇರ್ ಸ್ಟೈಲ್ ಕೂಡ ಥೇಟ್ ಡೊನಾಲ್ಡ್ ಟ್ರಂಪ್ ಅವರ ಶೈಲಿಯಲ್ಲೇ ಇರುವುದು ವಿಶೇಷ. ಸುಮಾರು 700 ಕೆ.ಜಿ. ತೂಕವಿರುವ ಈ ಎಮ್ಮೆ ನೋಡಲು ಅತ್ಯಂತ ವಿಭಿನ್ನವಾಗಿ ಕಾಣುತ್ತದೆ.
ನೆತನ್ಯಾಹು ಎಮ್ಮೆ
ಇನ್ನೊಂದೆಡೆ, ‘ನೆತನ್ಯಾಹು’ ಎಂದು ಹೆಸರಿಸಲಾದ ಮತ್ತೊಂದು ಎಮ್ಮೆ ಬರೋಬ್ಬರಿ 750 ಕೆ.ಜಿ. ತೂಕವಿದೆ. ಇದು ಆಗಾಗ ಜೋರಾಗಿ ಗೊರಕೆ ಹೊಡೆಯುವುದು ಹಾಗೂ ಮಾಲೀಕರ (ಪಾಲಕರ) ಮೇಲೆ ಸುಖಾಸುಮ್ಮನೆ ಆಕ್ರಮಣ ಮಾಡಲು ಯತ್ನಿಸುವ ವಿಚಿತ್ರ ಸ್ವಭಾವವನ್ನು ಹೊಂದಿದೆ ಎಂದು ಅದರ ಮಾಲೀಕರು ತಿಳಿಸಿದ್ದಾರೆ.
— Suraya (@Suraya36328) May 13, 2026








