ಹಾವೇರಿ: ಕಾಡು ಹಂದಿ ಬೇಟೆಗಾಗಿ ಇರಿಸಿದ್ದಂತ ನಾಡಬಾಂಬ್ ಒಂದು ಸ್ಪೋಟಗೊಂಡ ಪರಿಣಾಮ, ಎಮ್ಮೆಯೊಂದರ ಬಾಯಿ ಗಾಯಗೊಂಡು ನರಳಿ ನರಳಿ ಪ್ರಾಣಬಿಟ್ಟಿರುವಂತ ಘಟನೆ ಹಾವೇರಿಯ ಹಾನಗಲ್ ನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹೊಸಕೊಪ್ಪದಲ್ಲಿ ರೈತ ಬಾಷಾಸಾಬ್ ಬಂಕಾಪುರ ಎಂಬುವರ ಎಮ್ಮೆಯನ್ನು ಕಾಡಂಜಿನನಲ್ಲಿ ಮೇಯೋದಕ್ಕೆ ಬಿಡಲಾಗಿತ್ತು. ಮೇವು ತಿನ್ನುವ ವೇಳೆಯಲ್ಲಿ ಕಾಡು ಹಂದಿಗೆ ಇರಿಸಿದ್ದಂತ ನಾಡಬಾಂಬ್ ಅನ್ನು ಕಚ್ಚಿದೆ. ಈ ಪರಿಣಾಮ ನಾಡ ಬಾಂಬ್ ಸ್ಪೋಟಗೊಂಡು ಬಾಯಿ ಛಿದ್ರ ಛಿದ್ರಗೊಂಡು ನರಳಾಡಿದೆ.
ನಾಡಬಾಂಬ್ ಸ್ಪೋಟಗೊಂಡು ಗಾಯಗೊಂಡಿದ್ದಂತ ಎಮ್ಮೆಗೆ ಚಿಕಿತ್ಸೆ ಕೊಡಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ಯಾರೋ ದುಷ್ಕರ್ಮಿಗಳು ಕಾಡು ಹಂದಿ ಬೇಟೆಗಾಗಿ ನಾಡಬಾಂಬ್ ಇರಿಸಿದ್ದೇ ಈ ದುರ್ಘಟನೆಗೆ ಕಾರಣ. ಅವರನ್ನು ಪತ್ತೆ ಹಚ್ಚಿ ಬಂದಿಸುವಂತೆ ರೈತ ಬಾಷಾಸಾಬ್ ಆಗ್ರಹಿಸಿದ್ದಾರೆ.
ಶಿವಮೊಗ್ಗ: 1 ದಿನದ ಗುಂಡು ಮಗುವನ್ನೇ ಬಿಟ್ಟೋದ ತಾಯಿ, ಪೋಷಕರ ಪತ್ತೆಗಾಗಿ ಮನವಿ