ನವದೆಹಲಿ: ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೊಸ ಆದಾಯ ಸೃಷ್ಟಿಸುವ ಅವಕಾಶಗಳತ್ತ ಬಜೆಟ್ ಗಮನ ಹರಿಸಲಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಇಂದು ಬಜೆಟ್ ಮಂಡನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಜೆಟ್ ನಲ್ಲಿ ಎರಡು ಮಹತ್ವದ ನಿರ್ಣಯಗಳಾಗಿವೆ. ನಿರ್ಮಲಾ ಸೀತಾರಾಮನ್ ಹಾಗೂ ತಂಡಕ್ಕೆ ಧನ್ಯವಾದಗಳು. ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿಸುವಂತ ಲಕ್ ದೀಪ್ ದೀದಿ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಆಶಾ, ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ದೇಶದ ಅಭಿವೃದ್ದಿಗೆ ನಾಲ್ಕು ಸ್ತಂಭಗಳು ಪ್ರಮುಖವಾಗಿವೆ. ಯುವಕರು, ಮಹಿಳೆಯರು, ರೈತರು ಹಾಗೂ ಬಡವರು. ಈ ವರ್ಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ. ಇದು ದೇಶದ ಭವಿಷಅಯವನ್ನು ನಿರ್ಮಿಸುತ್ತಿರುವ ಬಜೆಟ್ ಆಗಿದೆ. ಈ ಬಜೆಟ್ ನಂಬಿಕೆಯನ್ನು ಒಳಗೊಂಡಿದೆ. ಆತ್ಮ ನಿರ್ಭಾರ್ ಅಭಿಯಾನವನ್ನು ಸಾಕಾರಗೊಳಿಸುವಂತ ಎಲ್ಲಾ ಅಂಶಗಳು ಇಂದಿನ ಬಜೆಟ್ ನಲ್ಲಿ ಇದ್ದಾವೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮೀನುಗಾರರಿಗಾಗಿ ಮತ್ಸ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. 1 ಕೋಟಿ ಮನೆಗಳಿಗೆ ಉಚಿತ ಸೋಲಾರ್ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೊಸ ಆದಾಯ ಸೃಷ್ಟಿಸುವ ಅವಕಾಶಗಳತ್ತ ಬಜೆಟ್ ಗಮನ ಹರಿಸಲಿದೆ ಎಂಬುದಾಗಿ ಪ್ರಧಾನಿ ಮೋದಿ ತಿಳಿಸಿದರು.
“ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಬಜೆಟ್ ನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ನಾವೀನ್ಯತೆಗಾಗಿ 1 ಲಕ್ಷ ಕೋಟಿ ರೂ.ಗಳ ನಿಧಿಯನ್ನು ಘೋಷಿಸಲಾಗಿದೆ ಎಂದರು.