ನವದೆಹಲಿ : 2026 ನೇ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದರು. 9ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು ರವಿದಾಸ್ ಅವರ ಜನ್ಮ ದಿನಾಚರಣೆ ಹಾಗೂ ಮಾಘ ಪೂರ್ಣಿಮೆ ದಿನ ಬಜೆಟ್ ಮಂಡಿಸುತ್ತಿದ್ದೇನೆ ಎಂದು ನಿರ್ಮಲ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದರು. ವಿದೇಶಿ ಪ್ರವಾಸ ಕೈಗೊಳ್ಳುವವರಿಗೆ ಇನ್ಮುಂದೆ ಟ್ಯಾಕ್ಸ್ ಇಲ್ಲ ವಿದೇಶಿ ಪ್ರವಾಸಿಗರಿಗೆ ಶೇಕಡ 2ರಷ್ಟು ಟ್ಯಾಕ್ಸ್ ಕಡಿತಗೊಳಿಸಲಾಗುತ್ತೆ ಎಂದು ನಿರ್ಮಲ ಸೀತಾರಾಮನ್ ತಿಳಿಸಿದರು
ವಿದೇಶಿ ವಿನಿಮಯ ಕಾನೂನು ಪರಿಷ್ಕರಣೆಯ ನಿರ್ಧಾರದಿಂದ ವಿದೇಶಿ ಹೂಡಿಕೆದಾರರಿಗೆ ಅನುಕೂಲವಾಗಲಿದ್ದು ಭಾರತದಲ್ಲಿ ಹೂಡಿಕೆ ಮಾಡಲು ಅನುಕೂಲ ಆಗಲಿದೆ ಇದರಿಂದ ವಿದೇಶಿ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಮಹಿಳಾ ಉದ್ಯಮಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಆಯುರ್ವೇದದ ಪ್ರಾಡಕ್ಟ್ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಮೂರು ಆಯುರ್ವೇದ ಸಂಸ್ಥೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಪೂರ್ವದ ರಾಜ್ಯಗಳಲ್ಲಿ ಆಯುರ್ವೇದ ಸಂಸ್ಥೆ ಮಾಡಲಾಗುತ್ತಿದ್ದು 5 ವೈದ್ಯಕೀಯ ಕೇಂದ್ರ ಸ್ಥಾಪನೆಗೆ ಬಜೆಟ್ ನಲ್ಲಿ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು ಇದರಿಂದ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಅನುಕೂಲ ಆಗಲಿದೆ ಹಾಗಾಗಿ ಆಯುರ್ವೇದ ಕೇಂದ್ರಗಳನ್ನು ಸ್ಥಾಪನೆಗೆ ಬಜೆಟ್ ನಲ್ಲಿ ಅನುದಾನ ಘೋಷಿಸಲಾಯಿತು .
ಹೊಸದಾಗಿ 20 ರಾಷ್ಟ್ರೀಯ ಜಲಮಾರ್ಗ ನಿರ್ಮಾಣ ಯೋಜನೆ ನಿರ್ಮಾಣ ಗುರಿ ಹೊಂದಿದ್ದು ಮುಂದಿನ ವರ್ಷಗಳಲ್ಲಿ 20 ಜಲಮಾರ್ಗದ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು.ಹೈ ಸ್ಪೀಡ್ ರೈಲ್ವೆ ಕಾಲಿಡಾರ್ ಅನ್ನು ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು. ಪ್ರಮುಖ ಏಳು ನಗರಗಳನ್ನು ಜೋಡಿಸಲು ಹೈ ಸ್ಪೀಡ್ ರೈಲ್ವೆ ಯೋಜನೆ ಘೋಷಿಸಿದ್ದು ಮುಂಬೈ ಟು ಪುಣೆ, ಪುಣೆ ಟು ಹೈದರಾಬಾದ್, ಹೈದರಾಬಾದ್ ಟು ಬೆಂಗಳೂರು, ಹೈದರಾಬಾದ್ ಟು ಚೆನ್ನೈ, ಚೆನ್ನೈ ಟು ಬೆಂಗಳೂರು, ದೆಲ್ಲಿ ಟು ವಾರಣಾಸಿ, ವಾರಣಾಸಿ ಟು ಸಿಲಿಗುರಿ ಹೈ ಸ್ಪೀಡ್ ರೈಲ್ವೆ ಕಾರಿಡರನ್ನು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.






