ಮೈಸೂರು : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾ ಆಯುಕ್ತರಿಗೆ ಪತ್ರದ ಮೂಲಕ 14 ನಿವೇಶನಗಳ ಕರ ಪತ್ರಗಳನ್ನು ಹಿಂತಿರುಗಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದರ ಮಧ್ಯ ಸಿಎಂ ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಕೂಡ ಈ ಒಂದು ಪ್ರಕರಣದ ಕುರಿತಾಗಿ ಮಾತನಾಡಿದ್ದು ನಮ್ಮ ಅಣ್ಣನ ವಿರುದ್ಧ HD ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಷಡ್ಯಂತ್ರ ಮಾಡಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಅವರು 40ವರ್ಷದಿಂದ ನಮ್ಮ ಅಣ್ಣನ ಮೇಲೆ ಒಂದು ಕಪ್ಪು ಚುಕ್ಕೆಯೇ ಇಲ್ಲ. ಸೈಟ್ ವಾಪಸ್ ಕೊಟ್ಟ ಮೇಲೆ ಯಾಕೆ ರಾಜೀನಾಮೆ ನೀಡಬೇಕು? ಸಿದ್ದರಾಮಯ್ಯ ಯಾವ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಹೇಳಿಕೆ ನೀಡಿದ್ದಾರೆ.
ಅಣ್ಣನ ವಿರುದ್ಧ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ, ಕುಮಾರಸ್ವಾಮಿ, ಬಿವೈ ವಿಜಯೇಂದ್ರ ಸೇರಿದಂತೆ ಅನೇಕರು ನಮ್ಮ ಅಣ್ಣನ ವಿರುದ್ಧ ಷಡ್ಯಂತರ ಮಾಡಿದ್ದಾರೆ. 40 ವರ್ಷದಿಂದ ಒಂದು ನಮ್ಮ ಅಣ್ಣನ ಮೇಲೆ ಕಪ್ಪು ಚುಕ್ಕೆ ಬಿದ್ದಿಲ್ಲ. ಇದುವರೆಗೂ ನಮ್ಮ ಅಣ್ಣ ಬೇರೆ ಯಾವುದೇ ಆಸ್ತಿ ಆಗಲಿ ಜಮೀನು ಆಗಲಿ ಮಾಡಿಲ್ಲ. ನಮ್ಮ ಅಪ್ಪ ಏನು ಅವರ ಕಾಲದಲ್ಲಿ ಮಾಡಿಟ್ಟಿದ್ದು ಇದೆಯೋ ಅದಷ್ಟೇ ಇದೆ ಎಂದು ಸಿದ್ದೇಗೌಡ ತಿಳಿಸಿದರು.
ನಮ್ಮ ಅಣ್ಣನಿಗೆ ಆಸ್ತಿ ಆಸೆ ಇಲ್ಲ. ನಮ್ಮ ಅಪ್ಪನ ಜಮೀನು ಸಾಕಷ್ಟಿದೆ. ನಮ್ಮ ಅಪ್ಪನ ಜಮೀನನ್ನೇ ನಾವು ಭಾಗವಾಗಿ ತೆಗೆದುಕೊಂಡಿದ್ದೇವೆ.ಅದನ್ನು ಹೊರತುಪಡಿಸಿ ಊರಿನಲ್ಲಿ ಯಾವುದೇ ಆಸ್ತಿಯನ್ನು ನಮ್ಮ ಅಣ್ಣ ಮಾಡಿಲ್ಲ. ನಮ್ಮ ಅತ್ತಿಗೆಗೆ ಸೈಟ್ ಬಂದಿರುವ ವಿಚಾರ ಕೂಡ ನಮಗೆ ಗೊತ್ತಿಲ್ಲ. ನಮ್ಮಣ್ಣ ರಾಜೀನಾಮೆ ಕೊಡಬಾರದು ಎಂದು ಸಿಎಂ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಆಗ್ರಹಿಸಿದ್ದಾರೆ.