ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ನುಡಿದಂತೆ ರಾಜ್ಯದ ಬಡಜನರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಲಾಗಿತ್ತು ಆದರೆ ಬಿಎಸ್ ಯಡಿಯೂರಪ್ಪ ರಾಜಕೀಯ ಅಕ್ಕಿ ನೀಡದಂತೆ ಪ್ರಧಾನಿ ಮೋದಿಗೆ ದೂರ್ ನೀಡಿದರು ಉಳಿಗಾಲವಿಲ್ಲ ಎಂದು ದೂರು ನೀಡಿದರು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ 21 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಶಿವಮೊಗ್ಗದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿಕೆ ನೀಡಿದ್ದು ನರೇಂದ್ರ ಮೋದಿ ಕಾಂಗ್ರೆಸ್ನ ಗ್ಯಾರಂಟಿ ಪದವನ್ನೇ ಕದ್ದುಬಿಟ್ಟಿದ್ದಾರೆ ಎಂದು ಕಿಡಿ ಕಾರಿದರು.
ಕರ್ನಾಟಕದ ಬಡ ಜನರಿಗೆ ಕೊಡಲು ಮೋದಿ ಅಕ್ಕಿಯನ್ನೇ ಕೊಡಲಿಲ್ಲ.FCI ನಲ್ಲಿ ಅಕ್ಕಿ ಕೊಳೆಯುತ್ತಿದ್ದರು, ಮೋದಿ ರಾಜ್ಯಕ್ಕೆ ಅಕ್ಕಿ ನೀಡುತ್ತಿಲ್ಲ. ರಾಜ್ಯಕ್ಕೆ ಅಕಿ ಪೂರೈಸಿದಂತೆ ಮೋದಿಗೆ ಬಿಎಸ್ ಯಡಿಯೂರಪ್ಪ ದೂರು ನೀಡಿದ್ದರು ಎಂದು ತಿಳಿಸಿದರು.
ರಾಜಕ್ಕೆ ಅಕ್ಕಿ ಪೂರೈಸಿದರೆ ಬಿಜೆಪಿಗೆ ಉಳಿಗಾಲ ಇಲ್ಲವೆಂದು ಬಿಎಸ್ ಯಡಿಯೂರಪ್ಪ ದೂರು ನೀಡಿದರು. ಹಾಗಾಗಿ 5 ಕೆ.ಜಿ ಅಕ್ಕಿಯ ಬದಲು ಬಡವರಿಗೆ ಹಣ ನೀಡಲಾಗುತ್ತಿದೆ ಎಂದು ಶಿವಮೊಗ್ಗದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಲ ಹೇಳಿಕೆ ನೀಡಿದರು.