ಮಂಡ್ಯ: ಕಡೆ ಕಾರ್ತಿಕ ಅಮಾವಾಸ್ಯೆ ಹಿನ್ನಲೆ ಗ್ರಾಮ ದೇವತೆಯ ಹಬ್ಬಕ್ಕೆ ಬೂಕನಕೆರೆಗೆ ಎಂಟ್ರಿಕೊಟ್ಟ ಬಿಎಸ್ವೈಗೆ ಗ್ರಾಮಸ್ಥರು ಅದ್ದೂರಿ ಆದರದ ಸ್ವಾಗತ ಕೋರಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ; ವಾಹನ ಸವಾರರಿಗೆ ಕಿರಿಕಿರಿ
ಬೂಕನಕೆರೆಯ ಗ್ರಾಮದೇವತೆಗಳಾದ ಗೌಗಲಮ್ಮ ಹಾಗೂ ಈಶ್ವರ ದೇವರ ಹಬ್ಬದಲ್ಲಿ ಪಾಲ್ಗೊಳ್ಳಲು ಬಿಎಸ್ವೈ ಸ್ವಗ್ರಾಮಕ್ಕೆ ಆಗಮಿಸಿದ್ರು. ಮೊದಲು ತಮ್ಮ ಮೂಲ ನಿವಾಸಕ್ಕೆ ಭೇಟಿ ನೀಡಿದ ಬಿಎಸ್ವೈರನ್ನ ಕಂಡು ಸಂತಸಪಟ್ಟ ಕುಟುಂಬಸ್ಥರು ಅವರನ್ನ ಆದರದಿಂದ ಬರಮಾಡಿಕೊಂಡ್ರು.. ಕುಟುಂಬಸ್ಥರೊಂದಿಗೆ ಕೆಲಕಾಲ ಸಮಯ ಕಳೆದ ಬಿಎಸ್ವೈ ಅವರ ಯೋಗಕ್ಷೇಮ ವಿಚಾರಿಸಿದ್ರು.
ಗ್ರಾಮದೇವತೆ ಹಬ್ಬಕ್ಕೆ ಬಿಎಸ್ವೈರನ್ನ ಮೂಲ ನಿವಾಸದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ದೇವಾಲಯಕ್ಕೆ ಕರೆತರಲಾಯ್ತು.. ಈಶ್ವರ ಹಾಗೂ ಗೌಗಲಮ್ಮ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಬಿಎಸ್ವೈ ವಿಶೇಷ ಪೂಜೆ ಸಲ್ಲಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು. ವೇದಿಕೆ ಮೇಲೆ ಕೆ.ಆರ್ ಪೇಟೆ ಶಾಸಕ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡರನ್ನ ಬಿಎಸ್ವೈ ಹಾಡಿಹೊಗಳಿದ್ರು. ಇದೇ ವೇಳೆ ಪ್ರತಿಪಕ್ಷಗಳ ಮೇಲೂ ಬಿಎಸ್ವೈ ವಾಗ್ದಾಳಿ ನಡೆಸಿದರು.
BIGG NEWS: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ; ವಾಹನ ಸವಾರರಿಗೆ ಕಿರಿಕಿರಿ
ತಾಲೂಕು ಕಚೇರಿ ಕಡೆ ಗಮನ ಕೊಡಿ ಎಂದ ಜನ.. ಬಿಎಸ್ವೈ ಭಾಷಣ ಮುಗಿಸುತ್ತಿದ್ದಂತೆ ಧ್ವನಿ ಎತ್ತಿದ ಗ್ರಾಮಸ್ಥನೋರ್ವ ಸಚಿವ ನಾರಾಯಣಗೌಡ ತಾಲೂಕು ಕಚೇರಿ ಕಡೆ ಗಮನ ಹರಿಸಬೇಕು ಅಂತ ಗುಡುಗಿದ್ರು. ಇದು ಕೆ. ಆರ್ ಪೇಟೆ ತಾಲ್ಲೂಕು ಕಚೇರಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಸತ್ಯವನ್ನ ತೆರೆದಿಟ್ಟಂತಿತ್ತು. ಸ್ಥಳೀಯರು ಮಾತಾಡ್ತಿರೋದು.
BIGG NEWS: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ; ವಾಹನ ಸವಾರರಿಗೆ ಕಿರಿಕಿರಿ
ಒಟ್ಟಿನಲ್ಲಿ ವರ್ಷಕ್ಕೆ ಬರೋ ಹಬ್ಬದಹಾಗೆ ವರ್ಷಕ್ಕೊಮ್ಮೆ ಬೂಕನಕೆರೆಗೆ ಬಿಎಸ್ವೈ ಬರೋದು ಅಲ್ಲಿನ ಜನರಿಗೆ ಹಬ್ಬವೇ ಆಗಿದೆ. ಏನೆನೋ ಕಂಡ ಮೇಲೂ ನಮ್ಮೂರೆ ನಮಗೆ ಮೇಲು ಅನ್ನೋ ಹಾಗೆ ಎಷ್ಟೇ ಎತ್ತರಕ್ಕೆ ಬೆಳೆದ್ರೂ ಜನ್ಮಕೊಟ್ಟ ತಾಯಿ ಹಾಗೂ ತಾಯ್ನಾಡನ್ನ ಮರೆಯಬಾರದು ಅನ್ನೋದನ್ನ ಬೂಕನಕೆರೆಯಲ್ಲಿ ಬಿಎಸ್ವೈ ಸಾರಿ ಸಾರಿ ಹೇಳಿದ್ದಾರೆ.