ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಗಡಿ ಭದ್ರತಾ ಪಡೆಯು (Border Security Force) ವಿವಿಧ ಹುದ್ದೆಗಳ ಭರ್ತಿಗೆ ಕಳೆದ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಹುದ್ದೆಗಳ ನೇಮಕಾತಿಗೆ (Recruitment) ಸಂಬಂಧಿಸಿದಂತೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ.
ಗಡಿ ಭದ್ರತಾಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, . ಒಟ್ಟು 255 ಹುದ್ದೆಗಳು ಖಾಲಿಯಿದೆ. ಅರ್ಜಿ ಸಲ್ಲಿಸಲು 10-11-2022 ಕೊನೆಯ ದಿನಾಂಕವಾಗಿದೆ.
ಆಪರೇಟರ್ (ಸಂವಹನ) 46, ಇಲೆಕ್ಟ್ರೀಷಿಯನ್ 43, ಮಲ್ಟಿ ಸ್ಕಿಲ್ಡ್ ವರ್ಕರ್ 27, ಮಲ್ಟಿ ಸ್ಕಿಲ್ಡ್ ವರ್ಕರ್ (ಕುಕ್) 133, ಡ್ರಾಟ್ಸ್ ಮೆನ್ 16 ಹುದ್ದೆಗಳು ಸೇರಿ 255 ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ.
ಹುದ್ದೆಗಳಿಗೆ ಅನುಗುಣವಾಗಿ 10th, 12th, ಡಿಗ್ರಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದಾಗಿದೆ. ಜನರಲ್ ಮತ್ತು EWS ಅಭ್ಯರ್ಥಿಗಳಿಗೆ ರೂ.50, ಒಬಿಸಿ ಅಭ್ಯರ್ಥಿಗಳಿಗೆ ರೂ.50 ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ http://www.bro.gov.in/ ಗೆ ಭೇಟಿ ನೀಡಬಹುದಾಗಿದೆ. ಅಭ್ಯರ್ಥಿಗಳನ್ನು ನಿಗಧಿತ ವಿದ್ಯಾರ್ಹತೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಮೂಲ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.
‘ಎಷ್ಟೇ ವಿರೋಧವಿದ್ದರೂ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಕಾರ್ಯ ನಿಲ್ಲಲ್ಲ’: ಸಚಿವ ಆರ್ ಅಶೋಕ್
ನಿಮ್ಮ ‘ಅನಾರೋಗ್ಯ ಸಮಸ್ಯೆ’ಗೆ ಇಲ್ಲಿ ಸಿಗತ್ತೆ ಕಡಿಮೆ ವೆಚ್ಚದಲ್ಲಿ ‘ಹೋಮಿಯೋಪತಿ ಚಿಕಿತ್ಸೆ’ | Homeopathy Medicine