ಬೆಳಗಾವಿ: ಜಿಲ್ಲೆಯ ಬಿಎಸ್ ಎಫ್ ಯೋಧ ಸದ್ದಾಂ ಜಮಾದಾರ್ ಅನಾರೋಗ್ಯದ ಕಾರಣದಿಂದಾಗಿ ಕರ್ತವ್ಯದಲ್ಲಿ ಇದ್ದಾಗಲೇ ಗುಜರಾತ್ನ ಬುಜ್ನಲ್ಲಿ ನಿಧನರಾಗಿದ್ದಾರೆ.
‘ಸದನದ ಬಗ್ಗೆ ಹಗುರವಾಗಿ ಯಾರೂ ಮಾತನಾಡಬೇಡಿ’ : ಶಾಸಕರಿಗೆ ಸ್ಪೀಕರ್ ಕಾಗೇರಿ ಖಡಕ್ ಎಚ್ಚರಿಕೆ
ಸದ್ದಾಂ ಅವರು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಬಿರೇಶ್ವರ ನಗರದವರು. ಇತ್ತೀಚಿಗೆ ರಜೆ ಪಡೆದು ಊರಿಗೆ ಬಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಮಂಗಳವಾರ ಯೋಧನ ಪಾರ್ಥಿವ ಶರೀರ ಸಂಕೇಶ್ವರ ಪಟ್ಟಣಕ್ಕೆ ಆಗಮಿಸಲಿದೆ.
ಸದ್ದಾಂ ಜಮಾದಾರ್ ಅವರಿಗೆ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆದರೆ ಅಕಾಲಿಕವಾಗಿ ನಿಧನ ಹೊಂದಿದ್ದು, ಅತೀವ ದುಃಖ ಉಂಟಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಅಣ್ಣತಂಮ್ಮದಿರನ್ನು ಅಗಲಿದ್ದಾರೆ.